ಟೆರರ್ ಫಂಡಿಂಗ್: 7 ಕಾಶ್ಮೀರ ಪ್ರತ್ಯೇಕತಾವಾದಿಗಳ ಬಂಧನ |News Mirchi

ಟೆರರ್ ಫಂಡಿಂಗ್: 7 ಕಾಶ್ಮೀರ ಪ್ರತ್ಯೇಕತಾವಾದಿಗಳ ಬಂಧನ

ನವದೆಹಲಿ: ಭಯೋತ್ಪಾದಕ ಸಂಘಟನೆಗಳಿಗೆ ಹಣಕಾಸು ನೆರವು ನೀಡುತ್ತಿದ್ದ ಪ್ರಕರಣದಲ್ಲಿ ಇಂದು ರಾಷ್ಟ್ರೀಯ ತನಿಖಾ ತಂಡ 7 ಜನ ಪ್ರತ್ಯೇಕತಾವಾದಿ ನಾಯಕರನ್ನು ಬಂಧಿಸಿದೆ. ಹುರಿಯತ್ ಕಾನ್ಫರೆನ್ಸ್ ಮುಖ್ಯಸ್ಥ ಸೈಯದ್ ಅಲೀ ಶಾ ಗಿಲಾನಿ ಅಳಿಯ ಅಲ್ತಾಫ್ ಶಾ, ಬಿಟ್ಟಾ ಕರಾಟೆ, ಹುರಿಯತ್ ಮುಖಂಡ ನಯೀಮ್ ಖಾನ್, ಅಯಾಜ್ ಅಕ್ಬರ್, ಪೀರ್ ಸೈಫುಲ್ಲಾ, ಮೆರಾಜುದ್ದೀನ್ ಕಲ್ವಾಲ್, ಹುರಿಯತ್ ಚೇರ್ಮನ್ ಮಿರ್ವಾಯಿಜ್ ಉಮರ್ ಫಾರೂಖ್ ಸಂಬಂಧಿ ಶಾಹಿದ್ ಉಲ್ ಇಸ್ಲಾಮ್ ಬಂಧಿತರು. ಇವರನ್ನು ಬಂಧಿಸಿ ಮತ್ತಷ್ಟು ವಿಚಾರಣೆಗಾಗಿ ದೆಹಲಿಗೆ ಕರೆದೊಯ್ಯುತ್ತಿದ್ದಾರೆ.

ಇತ್ತೀಚೆಗೆ ಭಯೋತ್ಪಾದಕ ಸಂಘಟನೆಗಳಿಗೆ ಆರ್ಥಿಕ ನೆರವು ನೀಡುತ್ತಿದ್ದ ಕಾಶ್ಮೀರ ಪ್ರತ್ಯೇಕತಾವಾದಿಗಳ ನಿವಾಸಗಳ ಮೇಲೆ ರಾಷ್ಟ್ರೀಯ ತನಿಖಾ ತಂಡ(ಎನ್.ಐ.ಎ) ಶೋಧ ನಡೆಸಿತ್ತು. ಟೆರರ್ ಫಂಡಿಂಗ್ ನಡೆಸುತ್ತಿದ್ದ ಅನೇಕ ಹುರಿಯತ್ ನಾಯಕರ ವಿರುದ್ಧ ಎಫ್.ಐ.ಆರ್ ಕೂಡಾ ದಾಖಲಾಗಿದ್ದವು. ಹುರಿಯತ್ ನಾಯಕ ಗಿಲಾನಿ ಮನೆಯಲ್ಲಿಯೂ ಇತ್ತೀಚೆಗೆ ಶೋಧ ನಡೆದಿತ್ತು. ಕಾಶ್ಮೀರ, ದೆಹಲಿ ಪ್ರದೇಶಗಳಲ್ಲಿ ಎನ್.ಐ.ಎ ಅಧಿಕಾರಿಗಳು ತನಿಖೆ ನಡೆಸಿದ್ದರು. ಶ್ರೀನಗರದಲ್ಲಿ ಪ್ರತ್ಯೇಕತಾವದಿ ನಾಯಕ ನಯೀಮ್ ಖಾನ್ ಮನೆಯ ಮೇಲೂ ಎನ್.ಐ.ಎ ದಾಳಿ ನಡೆಸಿತ್ತು.

ಚಪಾತಿ ದುಂಡಗಿಲ್ಲವೆಂದು ಗರ್ಭಿಣಿ ಪತ್ನಿ ಹತ್ಯೆ

ಭದ್ರತಾ ಪಡೆಗಳ ಮೇಲೆ ಕಲ್ಲೆಸೆಯುವುದು, ಪಾಠಶಾಲೆ, ಸರ್ಕಾರಿ ಕಛೇರಿಗಳ ಮೇಲೆ ದಾಳಿ ನಡೆಸುವುದು ಸೇರಿದಂತೆ ಉಗ್ರರ ಚಟುವಟಿಕೆಗಳಿಗೆ ಹಣ ಸರಬರಾಜು ಮಾಡುತ್ತಿದ್ದವರನ್ನು ಪತ್ತೆ ಹಚ್ಚಲು ಎನ್.ಐ.ಎ ತನಿಖೆ ಆರಂಭಿಸಿತ್ತು. 1990ರ ದಶಕದ ಆರಂಭದಲ್ಲಿ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳು ಆರಂಭವಾದ ನಂತರ ರಾಷ್ಟ್ರೀಯ ತನಿಖಾ ತಂಡ ಇಂತಹದ್ದೊಂದು ದಾಳಿ ನಡೆಸಿದ್ದು ಇದೇ ಮೊದಲಾಗಿತ್ತು.

ಪತಂಜಲಿ ಹೊಡೆತಕ್ಕೆ ದಂಗಾದ ಕೋಲ್ಗೇಟ್

Loading...
loading...
error: Content is protected !!