ಉಗ್ರರಿಗೆ ಹಣಕಾಸು ನೆರವು ಪ್ರಕರಣ: ಮತ್ತೆ ಜಮ್ಮೂ ಕಾಶ್ಮೀರದಲ್ಲಿ ಎನ್.ಐ.ಎ ದಾಳಿ – News Mirchi

ಉಗ್ರರಿಗೆ ಹಣಕಾಸು ನೆರವು ಪ್ರಕರಣ: ಮತ್ತೆ ಜಮ್ಮೂ ಕಾಶ್ಮೀರದಲ್ಲಿ ಎನ್.ಐ.ಎ ದಾಳಿ

ಉಗ್ರರಿಗೆ ಹಣಕಾಸು ನೆರವು ನೀಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಕಾಶ್ಮೀರದ ಶ್ರೀನಗರ, ಬಾರಾಮುಲ್ಲಾ ಮತ್ತು ಹಂದ್ವಾರಾ ಗಳಲ್ಲಿ 12 ಕಡೆ ರಾಷ್ಟ್ರೀಯ ತನಿಖಾ ತಂಡವು ದಾಳಿ ನಡೆದಿದೆ.

ಶ್ರೀನಗರ ಮೂಲಕ ವಕೀಲ ಮೊಹಮದ್ ಶಫಿ ರೇಶಿ ಮತ್ತು ಆತನ ಸಂಬಂಧಿ ಜರೂರ್ ವಟಾಲಿ ಅವರ ನಿವಾಸಗಳ ಮೇಲೂ ರಾಷ್ಟ್ರೀಯ ತನಿಖಾ ತಂಡ ದಾಳಿ ನಡೆಸಿದೆ. ಪಾಕ್ ಮೂಲದ ಸಂಘಟನೆಗಳಿಂದ ಕಾಶ್ಮೀರ ಕಣಿವೆಯಲ್ಲಿ ಅಶಾಂತಿ ಸೃಷ್ಟಿಸಲು ಹಣಕಾಸಿನ ನೆರವು ಪಡೆಯುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಐ.ಎ ನಡೆಸುತ್ತಿರುವ ತನಿಖೆಯ ಭಾಗವಾಗಿ ಈ ದಾಳಿಗಳು ನಡೆದಿವೆ.

ಇದಕ್ಕೂ ಮುನ್ನ ಜೂನ್ ನಲ್ಲಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ನಾಯಕರ ನಿವಾಸಗಳ ಮೇಲೆ ದಾಳಿ ನಡೆಸಿದ್ದ ಎನ್.ಐ.ಎ, ಪ್ರತ್ಯೇಕತಾವಾದಿ ಮುಖಂಡರಾದ ಹುರಿಯತ್ ನಾಯಕ ಸೈಯದ್ ಅಲಿ ಶಾ ಗಿಲಾನಿ ಅಳಿಯ ಅಲ್ತಾಫ್ ಶಾ, ಪೀರ್ ಸೈಫುಲ್ಲಾ, ಮೆಹ್ರಜುದ್ದೀನ್ ಕಲ್ವಾಲ್, ನಯೀಮ್ ಖಾನ್, ಅಯಾಜ್ ಅಕ್ಬರ್, ಶಾಹಿದ್ ಉಲ್ ಇಸ್ಲಾಮ್ ಮತ್ತು ಬಿಟ್ಟಾ ಕರಾಟೆ ಅವರನ್ನು ಬಂಧಿಸಿತ್ತು. ಈಗ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

Click for More Interesting News

Loading...
error: Content is protected !!