ಬಿಜೆಪಿ ಹಿರಿಯ ನಾಯಕರ ಹತ್ಯೆಗೆ ಸಂಚು – News Mirchi

ಬಿಜೆಪಿ ಹಿರಿಯ ನಾಯಕರ ಹತ್ಯೆಗೆ ಸಂಚು

ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರು, ಪ್ರಮುಖ ಮುಖ್ಯಮಂತ್ರಿಗಳನ್ನು ಉಗ್ರರು ಟಾರ್ಗೆಟ್ ಮಾಡಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳ ವರದಿಗಳು ಹೇಳುತ್ತಿವೆ. ಜೈಷ್-ಇ-ಮೊಹಮದ್(ಜೆಇಎಂ) ಮುಖ್ಯಸ್ಥ ಮೌಲಾನ ಮಸೂದ್ ಅಜರ್ ಈ ಸಂಚಿನ ಸೂತ್ರಧಾರಿ ಎಂದು ಇಂಟೆಲಿಜೆನ್ಸ್ ಮೂಲಗಳು ಹೇಳುತ್ತಿವೆ.

ಜೆಇಎಂ, ಲಷ್ಕರ್-ಇ-ತೊಯ್ಬಾ(ಎಲ್ಇಟಿ) ಸಂಘಟನೆಗಳು ಸೇರಿ ಬಾಂಗ್ಲಾದೇಶದಿಂದ ಈ ಸಂಚನ್ನು ಕಾರ್ಯರೂಪಕ್ಕೆ ತರಲು ಚಿಂತನೆ ನಡೆಸಿವೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಕೆಲ ಉಗ್ರರು ತಮ್ಮ ಗುರಿಯನ್ನು ಸಾಧಿಸಲು ಭಾರತದೊಳಗೆ ಪ್ರವೇಶಿಸಿದ್ದಾರೆ ಎಂಬು ಮಾಹಿತಿಗಳು ಲಭ್ಯವಾಗಿವೆ. ಕಡಿಮೆ ಭದ್ರತೆಯೊಂದಿಗೆ ಸುತ್ತಾಡುತ್ತಿರುವ ಪ್ರಸಿದ್ಧ ಬಿಜೆಪಿ ಮುಖ್ಯಮಂತ್ರಿಯೊಬ್ಬರನ್ನು ಭಯೋತ್ಪಾದಕ ಸಂಘಟನೆಗಳು ಗುರಿಯಾಗಿಸಿಕೊಂಡಿವೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಎಚ್ಚೆತ್ತುಕೊಂಡಿರುವ ಭಾರತದ ಗುಪ್ತಚರ ತಂಡ ಬಾಂಗ್ಲಾದೇಶದ ಅಧಿಕಾರಿಗಳ ನೆರವಿನಿಂದ ಢಾಕಾದಲ್ಲಿನ ಶಂಕಿತ ಪ್ರದೇಶಗಳ ಮೇಲೆ ದಾಳಿ ನಡೆಯುವಂತೆ ನೋಡಿಕೊಂಡಿದೆ.

ಆದರೆ ದಾಳಿಯಲ್ಲಿ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಹೆಸರು ಹೇಳಲಿಚ್ಛಿಸಿದ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. ಮಸೂದ್ ಅಜರ್ ಸೋದರಳಿಯೆ(ತೆಹ್ಲಾ ರಶೀದ್) ಹತ್ಯೆಗೆ ಪ್ರತೀಕಾರವಾಗಿ ಈ ಸಂಚು ನಡೆಯುತ್ತಿದೆ ಎನ್ನಲಾಗಿದೆ.

Get Latest updates on WhatsApp. Send ‘Add Me’ to 8550851559

Loading...