ಸೇನಾ ಸಮವಸ್ತ್ರ ಧರಿಸಿ ಬಂದ ಉಗ್ರರು: 6 ಉಗ್ರರ ಸಾವು, ಹುತಾತ್ಮರಾದ 7 ಯೋಧರು

ನಿಯಂತ್ರಣ ರೇಖೆಯ ಬಳಿ ಎರಡು ಬೇರೆ ಬೇರೆ ಪ್ರದೇಶಗಳಲ್ಲಿ ಉಗ್ರರು ಭಾರೀ ಪ್ರಮಾಣದ ದಾಳಿ ನಡೆಸಿದ್ದಾರೆ. ಈ ಘಟನೆಗಳಲ್ಲಿ ಒಬ್ಬರು ಮೇಜರ್ ಸೇರಿದಂತೆ ಏಳು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ.

ವ್ಯಾಸ ರಚಿತ ಮಹಾಭಾರತ

ಬಿಎಸ್ಎಫ್ ಡಿಐಜಿ ಸೇರಿದಂತೆ ಇನ್ನೂ 8 ಜನ ಭದ್ರತಾ ಸಿಬ್ಬಂಧಿ ಗಾಯಗೊಂಡಿದ್ದಾರೆ. ಈ ಘಟನೆಗಳಲ್ಲಿ ಆರು ಜನ ಉಗ್ರರನ್ನು ಸೇನೆ ಹತ್ಯೆ ಮಾಡಿದೆ. ಪಾಕಿಸ್ತಾನದ ಹೊಸ ಸೇನಾ ಮುಖ್ಯಸ್ಥನಾಗಿ ಜನರಲ್ ಆಗಿ ಜಾವೆದ್ ಬಜ್ವಾ ಜವಾಬ್ದಾರಿ ವಹಿಸಿಕೊಂಡ ದಿನವೇ ಈ ಘಟನೆ ನಡೆದಿದೆ.

ಪೊಲೀಸರ ಸಮವಸ್ತ್ರದಲ್ಲಿ ಉಗ್ರರು

ಮಂಗಳವಾರ ಮುಂಜಾನೆ ಕೆಲವು ಶಸ್ತ್ರಸಜ್ಜಿತ ಉಗ್ರರು ಪೊಲೀಸರ ಸಮವಸ್ತ್ರ ಧರಿಸಿ ನಗ್ರೋಟಾದಲ್ಲಿನ ಆರ್ಮಿ ಆರ್ಟಿಲರಿ ವಿಭಾಗದೊಳಗೆ ಪ್ರವೇಶಿಸಿದರು. ಗ್ರೆನೇಡ್ ಎಸೆಯುತ್ತಾ ಆರ್ಮಿ ಮೆಸ್ ಕಾಂಪ್ಲೆಕ್ಸ್ ಒಳಗೆ ನುಸುಳಿ ಅಲ್ಲಿದ್ದ ಸೆಂಟ್ರಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಮೊದಲು ನಡೆಸಿದ ದಾಳಿಯಲ್ಲಿ ಮೂವರು ಯೋಧರು ಹುತಾತ್ಮರಾದರು. ನಂತರ ಉಗ್ರರು ಅಧಿಕಾರಿಗಳು ಮತ್ತು ಅವರ ಕುಟುಂಬಳಿದ್ದ ಕಟ್ಟಡಗಳಿಗೆ ನುಗ್ಗಿದರು. ಹೀಗಾಗಿ ‘ಗೃಹ ಬಂಧನ’ ದಂತಹ ಪರಿಸ್ಥಿತಿ ಅಲ್ಲಿ ನೆಲೆಗೊಂಡಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸೇನೆ ಕೂಡಲೇ ಸ್ಪಂದಿಸಿ ಕಾರ್ಯಚರಣೆ ಶುರು ಮಾಡಿತು. ಅಲ್ಲಿದ್ದವರನ್ನೆಲ್ಲಾ ರಕ್ಷಿಸಿದರು. ಅಲ್ಲಿ 12 ಜನ ಸೈನಿಕರು, ಇಬ್ಬರು ಮಹಿಳೆಯರು, ಇಬ್ಬರು ಸಣ್ಣ ಮಕ್ಕಳಿದ್ದರು. ಈ ರಕ್ಷಣಾ ಕಾರ್ಯಚರಣೆಯಲ್ಲಿ ಒಬ್ಬ ಅಧಿಕಾರಿ ಮತ್ತು ಇಬ್ಬರು ಯೋಧರು ಹುತಾತ್ಮರಾದರು. ಸೇನೆ ಮೂವರು ಉಗ್ರರನ್ನು ಇಲ್ಲಿ ಹತ್ಯೆ ಮಾಡಿತು. ಹುತಾತ್ಮರಾದವರಲ್ಲಿ ಬೆಂಗಳೂರಿನ ಮೇಜರ್ ಅಕ್ಷಯ್ ಗಿರೀಶ್ ಕುಮಾರ್(31) ಕೂಡಾ ಒಬ್ಬರು.

ಮತ್ತೊಂದು ಘಟನೆಯಲ್ಲಿ ರಾಮಘಡ ಸೆಕ್ಟಾರ್ ನಲ್ಲಿ ಪಾಕ್ ಉಗ್ರರು ಒಳನುಸುಳಲು ಪ್ರಯತ್ನಿಸಿದಾಗ ಬಿಎಸ್ಎಫ್ ಮೂವರು ಉಗ್ರರನ್ನು ಹತ್ಯೆ ಮಾಡಿದ್ದಾರೆ.

Related Post

error: Content is protected !!