ಇಂತಹ ಸುದ್ದಿ ಸೃಷ್ಟಿಸಿದವರು ಚಪ್ಪಲಿಯೇಟು ತಿಂತಾರೆ! – News Mirchi

ಇಂತಹ ಸುದ್ದಿ ಸೃಷ್ಟಿಸಿದವರು ಚಪ್ಪಲಿಯೇಟು ತಿಂತಾರೆ!

ಅವರ ಹೆಸರು ಹಗರಣವೊಂದರಲ್ಲಿ ಕೇಳಿ ಬರುತ್ತಿದೆ. ಅರುಣಾಚಲ ಪ್ರದೇಶದಲ್ಲಿ ಜಲ ವಿದ್ಯುತ್ ಯೋಜನೆಗಾಗಿ ಅವರು ರೂ. 450 ಕೋಟಿ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಹಗರಣದಲ್ಲಿ ಪಾತ್ರವಿದೆ ಎಂಬುದಕ್ಕೆ ತಮ್ಮ ಬಳಿ ಆಡಿಯೋ ಸಾಕ್ಷಿ ಇದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಹೇಳಿದೆ.

ಆದರೆ ಈ ಆರೋಪಗಳನ್ನು ನಿರಾಕರಿಸಿರುವ ರಿಜಿಜು, ಇದು ನಾಚಿಕೆಗೇಡಿತನ. ಯಾರು ಈ ಕಥೆ ಸೃಷ್ಟಿಸಿದ್ದಾರೋ, ಅವರು ನನ್ನ ಎದುರಿಗೆ ಬಂದರೆ ಚಪ್ಪಲಿ ಏಟು ತಿನ್ನುತ್ತಾರೆ, ಜನರ ಸೇವೆ ಮಾಡುವುದು ಾನಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಿಜಿಜು ಕ್ಷೇತ್ರದಲ್ಲಿ ನಿರ್ಮಿಸುತ್ತಿರುವ ಯೋಜನೆಯ ಪ್ರದೇಶದಲ್ಲಿ ಕಲ್ಲು, ಗುಡ್ಡಗಳನ್ನು ಕಡಿಯಲು ವೆಚ್ಚವನ್ನು ಹೆಚ್ಚಳ ಮಾಡಿ ಬಿಲ್ಲುಗಳನ್ನು ಸೃಷ್ಟಿಸಿ ಲಾಭ ಪಡೆದಿದ್ದಾರೆ, ಅವರಿಗೆ ರಿಜಿಜು ಬೆಂಬಲವಾಗಿ ನಿಂತಿದ್ದಾರೆ, ರಿಜಿಜು ಸಂಬಂಧಿಯೊಬ್ಬರಿಗೆ ಈ ಯೋಜನೆಯೊಂದಿಗೆ ಸಂಬಂಧವಿದೆ ಎಂದು ಆರೋಪಿಸಲಾಗಿದೆ.

ಈ ಆರೋಪಗಳನ್ನು ಅಲ್ಲಗೆಳೆದಿರುವ ಸಚಿವ ರಿಜಿಜು, ಬುಡಕಟ್ಟು ಜನರಿಗೆ ಒಳ್ಳೆಯದನ್ನು ಮಾಡುವುದೂ ಕೂಡಾ ಭ್ರಷ್ಟಾಚಾರವೇ? ಎಂದು ಪ್ರಶ್ನಿಸಿದ್ದಾರೆ.

Comments (wait until it loads)
Loading...
class="clear">
error: Content is protected !!

News Mirchi is Stephen Fry proof thanks to caching by WP Super Cache