ಊಟದ ನಡುವೆ ತಂಪಾದ ನೀರು ಕುಡಿಯುತ್ತಿದ್ದೀರಾ? ಹಾಗಿದ್ದರೆ ಇದು ಓದಿ.. – News Mirchi

ಊಟದ ನಡುವೆ ತಂಪಾದ ನೀರು ಕುಡಿಯುತ್ತಿದ್ದೀರಾ? ಹಾಗಿದ್ದರೆ ಇದು ಓದಿ..

ಬೇಸಿಗೆಯಲ್ಲಿ ಮನೆಗೆ ಬರುತ್ತಿದ್ದಂತೆ ಫ್ರಿಡ್ಜ್ ಡೋರ್ ತೆರೆದು ತಂಪಾದ ನೀರು ಕುಡಿದು ಬಿಡುತ್ತೇವೆ. ಊಟ ಮಾಡುವಾಗಲೂ ಫ್ರಿಡ್ಜ್ ನಲ್ಲಿನ ನೀರಿನ ಕೂಲ್ ಆದ ನೀರಿನ ಬಾಟಲ್ ತೆಗೆದಿಟ್ಟು ಕುಡಿಯುತ್ತಿರುತ್ತೇವೆ. ಆದರೆ ಹೀಗೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎನ್ನುತ್ತಿದ್ದಾರೆ ವೈದ್ಯರು.

ಯಾವುದೇ ಆಹಾರ ತೆಗೆದುಕೊಂಡ ಕೂಡಲೇ ಹೆಚ್ಚು ತಂಪಾದ ನೀರು ಕುಡಿಯುವುದರಿಂದ ನಾವು ತಿಂದ ಆಹಾರದಲ್ಲಿರುವ ಎಣ್ಣೆ ಪದಾರ್ಥಗಳನ್ನು ಆ ತಂಪಾದ ನೀರು ಗಡ್ಡೆ ಕಟ್ಟುವಂತೆ ಮಾಡುತ್ತದೆ ಎನ್ನುತ್ತಿದ್ದಾರೆ. ಇದರಿಂದಾಗಿ ಆಹಾರ ಜೀರ್ಣವಾಗುವುದಿಲ್ಲ ಮತ್ತು ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಾಗುವ ಸಾಧ್ಯತೆ ಇದೆಯಂತೆ.

ಇದು ಹಾಗೇ ಮುಂದುವರೆದರೆ ಹೃದಯಸಂಬಂಧಿ ಖಾಯಿಲೆ ಮತ್ತು ಮೂತ್ರ ಸಂಬಂಧಿ ಖಾಯಿಲೆಗಳನ್ನು ಸ್ವಾಗತಿಸಿದಂತೆಯೇ. ಅತಿ ಮುಖ್ಯವಾಗಿ ಹೃದ್ರೋಗದಿಂದ ಬಳಲುತ್ತಿರುವವರಿ ತಂಪಾದ ನೀರನ್ನು ಸೇವಿಸಬಾರದು ಎಂದು ವೈದ್ಯರು ಸೂಚಿಸುತ್ತಿದ್ದಾರೆ.

Loading...