ಗುರ್ಮೀತ್ ನನ್ನು ಪೊಲೀಸರಿಂದ ತಪ್ಪಿಸಲು ನಡೆದ ಪ್ಲಾನ್ ಹೀಗಿತ್ತು... |News Mirchi

ಗುರ್ಮೀತ್ ನನ್ನು ಪೊಲೀಸರಿಂದ ತಪ್ಪಿಸಲು ನಡೆದ ಪ್ಲಾನ್ ಹೀಗಿತ್ತು…

ಪಂಚಕುಲ: ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ನನ್ನು ಬಂಧನದಿಂದ ತಪ್ಪಿಸಿ ಪರಾರಿಯಾಗುವಂತೆ ಮಾಡಲು ಡೇರಾ ಅನುಯಾಯಿಗಳು ಮಾಸ್ಟರ್ ಪ್ಲಾನ್ ಮಾಡಿದ್ದರು ಎಂದು ಬೆಳಕಿಗೆ ಬಂದಿದೆ. ಶುಕ್ರವಾರ ಪಂಚಕುಲ ಸಿಬಿಐ ನ್ಯಾಯಾಲಯ ಗುರ್ಮೀತ್ ಸಿಂಗ್ ನನ್ನು ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ತೀರ್ಪು ನೀಡಿದ ನಂತರ, ಗುರ್ಮೀತ್ ನನ್ನು ಪೊಲೀಸರಿಂದ ತಪ್ಪಿಸಲು ಡೇರಾ ಅನುಯಾಯಿಗಳು ಯತ್ನಿಸಿದ್ದಾಗಿ ಹರಿಯಾಣ ಪೊಲೀಸರು ಎಫ್.ಐ.ಆರ್ ನಲ್ಲಿ ಹೇಳಿದ್ದಾರೆ. ಆದರೆ, ಅಧಿಕಾರಿಗಳು ಆ ಗುರ್ಮೀತ್ ಸಹಚರರ ಯೋಜನೆಯನ್ನು ವಿಫಲಗೊಳಿಸಿದ್ದಾಗಿ ಎಫ್.ಐ.ಆರ್ ಪ್ರತಿಯಲ್ಲಿದೆ.

ಅತ್ಯಾಚಾರ ಪ್ರಕರಣದಲ್ಲಿ ಗುರ್ಮೀತ್ ತಪ್ಪಿತಸ್ತ ಎಂದು ತೀರ್ಮಾನವಾದ ನಂತರ ಗುರ್ಮೀತ್ ರಾಮ್ ರಹೀಮ್ ನೊಂದಿಗೆ ಬರುವ ಪೊಲೀಸರ ಮೇಲೆ ದಾಳಿ ನಡೆಸಿ ಗುರ್ಮೀತ್ ನೊಂದಿಗೆ ರಹಸ್ಯ ಸ್ಥಳಕ್ಕೆ ಪರಾರಿಯಾಗಲು ಯೋಜನೆ ರೂಪಿಸಲಾಗಿತ್ತು.

ತೀರ್ಪಿನ ನಂತರ ಗುರ್ಮೀತ್ ನೊಂದಿಗೆ ಹೊರಗೆ ಬಂದ ಭದ್ರತಾ ಸಿಬ್ಬಂದಿ ಸ್ಕಾರ್ಪಿಯೋ ಕಾರಿನಲ್ಲಿ ಹತ್ತಿಸಿ ಆತನ ಎರಡೂ ಬದಿಯಲ್ಲಿ ಕಾರಿನಲ್ಲಿ ಕುಳಿತಿದ್ದರು. ಕಾರು ಕೋರ್ಟ್ ಕಟ್ಟಡವನ್ನು ದಾಟಲು ಪೊಲೀಸ್ ಬ್ಯಾರಿಯರ್ ದಾಟಬೇಕಿತ್ತು. ಅಲ್ಲಿ ಸರಿಯಾಗಿ ಗುರ್ಮೀತ್ ಬೆಂಬಲಿಗರು ಕಾದು ಕುಳಿತಿದ್ದರು.

ಮೊದಲೇ ಅಂದುಕೊಂಡಂತೆ ಕಾರು ಬ್ಯಾರಿಯರ್ ದಾಟುವ ಮೊದಲೇ ಡೇರಾ ಅನುಯಾಯಿಗಳು ಕಾರನ್ನು ತಡೆದರು. ಗುರ್ಮೀತ್ ನನ್ನು ತಮಗೆ ಒಪ್ಪಿಸಬೇಕೆಂದು ಕೂಗಾಡಿದರು. ಹೀಗಿದ್ದಾಗ ಕಾರಿನಿಂದ ಆರು ಜನ ಭದ್ರತಾ ಅಧಿಕಾರಿಗಳು ಕೆಳಗಿಳಿದರು. ಅವರನ್ನು ನೋಡಿದ ಕೂಡಲೇ ಗುರ್ಮೀತ್ ನನ್ನು ತಪ್ಪಿಸಲು ಬಂದ ಬೆಂಬಲಿಗರಿಗೆ ಶಾಕ್. ಕಾರಣ ಸಾಮಾನ್ಯ ಪೊಲೀಸ್ ಪೇದೆಗಳು ಗುರ್ಮೀತ್ ಭದ್ರತೆಗಿರುತ್ತಾರೆ ಎಂದು ಭಾವಿಸಿದ್ದರೆ, ಇಳಿದದ್ದು ಮಾತ್ರ ಶಸ್ತ್ರಸಜ್ಜಿತ ಅಧಿಕಾರಿಗಳು. ಹೀಗಾಗಿ ಗುರ್ಮೀತ್ ನನ್ನು ತಪ್ಪಿಸುವುದಾ ಅಥವಾ ಹಾಗೇ ಬಿಟ್ಟು ಪರಾರಿಯಾಗುವುದಾ ಎಂಬ ಗೊಂದಲದಲ್ಲಿ ಬಿದ್ದರು. ಕೊನೆಗೆ ಹೇಗಾದರೂ ತಪ್ಪಿಸಲೇ ಬೇಕೆಂದು ನಿರ್ಧರಿಸಿ ಅಧಿಕಾರಿಗಳ ಮೇಲೆ ಕಾರು ಹರಿಸಬೇಕೆಂದು ಅವರ ಚಾಲಕನಿಗೆ ಹೇಳಿದರು. ಆದರೆ ಅಷ್ಟರಲ್ಲಿ ಅವರ ಯೋಜನೆಯನ್ನು ಅರಿತ ಭದ್ರತಾ ಸಿಬ್ಬಂದು ಗುರ್ಮೀತ್ ಬೆಂಬಲಿಗರಿದ್ದಲ್ಲಿಗೆ ಹೋಗಿ ಅವರನ್ನು ಬಂಧಿಸಿದರು.

ಗುರ್ಮೀತ್ ನನ್ನು ತಪ್ಪಿಸಲು ಆತನ ಬೆಂಬಲಿಗರು ಮಾಡಿದ್ದ ಯೋಜನೆಯ ವಿವರಗಳನ್ನು ಎಫ್.ಐ.ಆರ್ ನಲ್ಲಿ ಹರಿಯಾಣ ಪೊಲೀಸರು ದಾಖಲಿಸಿದ್ದಾರೆ. ವಶಕ್ಕೆ ಪಡೆದವರ ಮೇಲೆ ಹಲವು ಸೆಕ್ಷನ್ ಗಳಡಿಯಲ್ಲಿ ಕೇಸು ದಾಖಲಿಸಿಕೊಂಡಿದ್ದಾರೆ. ಡೇರಾ ಅನುಯಾಯಿಗಳಿಂದ ಆಟೋಮ್ಯಾಟಿಕ್ ಮಷೀನ್ ಗನ್, ಪಿಸ್ತೂಲು, ಬುಲೆಟ್ ಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

Loading...
loading...
error: Content is protected !!