ಆಕೆಯ ಹೃದಯವೇ ನಾಪತ್ತೆ… ಎರಡು ಬಾರಿ ಬದಲಾಯಿಸಿದ್ದಾದರೂ ಯಾರು?

ಮುಂಬೈ: ಐದು ವರ್ಷಗಳ ಹಿಂದೆ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಪುಣೆ ಯುವತಿ ಸನಮ್ ಹಾಸನ್ ಹೃದಯ ನಾಪತ್ತೆಯಾಗಿದ್ದು, ಎರಡು ಬಾರಿ ಪ್ರಯೋಗಾಲಯಕ್ಕೆ ಕಳುಹಿಸಿದ್ದ ಹೃದಯಗಳು ಇಬ್ಬರು ಬೇರೆ ವ್ಯಕ್ತಿಗಳಿಗೆ ಸೇರಿದ್ದು ಎಂಬ ವಿಷಯ ಬೆಳಕಿಗೆ ಬಂದಿದೆ. ವಿಚಾರಣೆಯನ್ನು ಮುಂದುವರೆಸಿ ಅಪರಾಧಿಗಳು ಯಾರು ಎಂಬುದನ್ನು ಪತ್ತೆ ಹಚ್ಚಲು ಹೃದಯ ಅಗತ್ಯವಾಗಿದೆ ಎಂದು ಸಿಬಿಐ ಅಧಿಕಾರಿಗಳು ಹೇಳುತ್ತಿದ್ದಾರೆ. 2012 ರಲ್ಲಿ ಸನಮ್ ಹಾಸನ್ ತನ್ನ 19 ನೇ ಹುಟ್ಟು ಹಬ್ಬವನ್ನು ಆಚರಿಸಿದ ನಂತರ ಸಾವನ್ನಪ್ಪಿದ್ದಳು.

ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ಆಕೆಯ ಹೃದಯಲ್ಲಿ ರಕ್ತನಾಳಗಳು ಶೇ.70 ರಷ್ಟು ಬ್ಲಾಕ್ ಅಗಿವೆ. ಹೆಚ್ಚು ಮದ್ಯ ಸೇವಿಸಿದ್ದರಿಂದ ಹೀಗಾಗಿದೆ ಎಂದು ಹೇಳಿದ್ದರು. ಹಾಗೆಯೇ ಆಕೆಯ ಒಳ ಉಡುಪುಗಳ ಮೇಲೆ ವೀರ್ಯದ ಕಲೆಗಳವೆ. ಹೀಗಾಗಿ ಲೈಂಗಿಕ ಕ್ರಿಯೆ ನಡೆದಿದೆ ಎಂದು ಸ್ಪಷ್ಟವಾಗುತ್ತಿದೆ ಎಂದು ವೈದ್ಯರು ಹೇಳಿದ್ದರು. ಆದರೆ ಫುಟ್ ಬಾಲ್ ಆಟಗಾರ್ತಿಯಾಗಿರುವ ತಮ್ಮ ಮಗಳಿಗೆ ಹೃದಯಕ್ಕೆ ಸಂಬಂಧಿಸಿದಂತೆ ಯಾವುದೇ ಖಾಯಿಲೆಯಿಲ್ಲ, ಸತ್ಯ ಹೊರಬೀಳಲು ಡಿ.ಎನ್.ಎ ಪರೀಕ್ಷೆ ನಡೆಸಬೇಕು ಎಂದು ಸನಮ್ ತಂದೆ ತಾಯಿಗಳು ಆಗ ಒತ್ತಾಯಿಸಿದ್ದರು.

ಹೃದಯಲ್ಲಿ ರಕ್ತನಾಳಗಳು ಬ್ಲಾಕ್ ಆಗಿದ್ದರಿಂದಲೇ ಆಕೆ ಸಾವನ್ನಪ್ಪಿದ್ದಳೆಂದು ವೈದ್ಯರು ಹೇಳಿದ್ದರಿಂದಾಗಿ, ಪ್ರಕರಣ ತನಿಖೆಯಲ್ಲಿ ಹೃದಯದ ಪಾತ್ರ ಪ್ರಮುಖವಾಗಿತ್ತು. ಸನಮ್ ಪೋಷಕರು ಶಂಕೆ ವ್ಯಕ್ತಪಡಿಸಿದ್ದರಿಂದಾಗಿ ಆಕೆಯ ದೇಹದ ಅಂಗಾಂಗಗಳನ್ನು ಮುಂಬೈನಲ್ಲಿನ ಕಲೀನಾ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ನಡೆಸಿದರು. ಆದರೆ ಅಲ್ಲೊಂದು ಆಶ್ಚರ್ಯ ಕಾದಿತ್ತು. ಅಲ್ಲಿಗೆ ಬಂದು ಹೃದಯ ಸನಮ್’ಳದ್ದಾಗಿರಲಿಲ್ಲ, ಬದಲಿಗೆ ಅದೊಂದು ಪುರುಷರ ಹೃದಯವಾಗಿತ್ತು. ನಂತರ ಪ್ರಕರಣವನ್ನು ಸಿಬಿಐ ಗೆ ವಹಿಸಿದ್ದಾರೆ.

ಮೈಕ್ರೋಮ್ಯಾಕ್ಸ್ ನಿಂದ ಕ್ಯಾನ್ವಾಸ್-1 ಸ್ಮಾರ್ಟ್ ಫೋನ್, ಬೆಲೆ ರೂ.6,999

2016 ರ ಆಗಸ್ಟ್ ನಲ್ಲಿ ಸನಮ್ ಮೃದೇಹವನ್ನು ಸ್ಮಶಾನದಿಂದ ಹೊರಗೆ ತೆಗೆದ ಸಿಬಿಐ, ಈ ಜನವರಿಯಲ್ಲಿ ಹೈದರಾಬಾದಿನ ಫೋರೆನ್ಸಿಕ್ ಲ್ಯಾಬ್ ಗೆ ಪರೀಕ್ಷೆಗೆ ಕಳುಹಿಸಿತ್ತು. ಆಗ ಎಲ್ಲಾ ಅಂಗಾಂಗಳು ಸನಮ್ ಳದ್ದಾಗಿದ್ದು, ಹೃದಯ ಮಾತ್ರ ವೃದ್ಧೆಯೊಬ್ಬರದ್ದು ಎಂದು ತಿಳಿದು ಬಂದಿತ್ತು. ಎರಡು ಬಾರಿ ಹೃದಯ ಬದಲಾದ ಕುರಿತು ಸನಮ್ ಪೋಷಕರು ಹಲವು ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಮಗಳ ಸಾವಿನ ಹಿಂದೆ ಪ್ರಬಲ ಶಕ್ತಿಗಳು ಅಡಗಿವೆ ಎಂದು ಹೇಳುತ್ತಿದ್ದಾರೆ. ಹೃದಯ ಒಮ್ಮೆ ಬದಲಾದರೆ ಆಕಸ್ಮಿಕವೆನ್ನಬಹುದು, ಆದರೆ ಎರಡನೇ ಬಾರಿಯೂ ಹಾಗೆಯೇ ನಡೆದಿದೆ ಎಂದರೆ ಏನರ್ಥ ಎಂದು ಅವರು ಪ್ರಶ್ನಿಸುತ್ತಿದ್ದಾರೆ. ಮತ್ತೊಂದು ಕಡೆ ಸಿಬಿಐ ಅಧಿಕಾರಿಗಳು ಮಾತ್ರ ಹೃದಯ ಸಿಕ್ಕರೆ ಮಾತ್ರ ನಡೆದಿದ್ದೇನು ಎಂದು ಪತ್ತೆ ಹಚ್ಚಲು ಸಾಧ್ಯ ಎನ್ನುತ್ತಿದ್ದಾರೆ.

ಸಂಜಯ್ ದತ್ ಅವಧಿಪೂರ್ವ ಬಿಡುಗಡೆ, ಸಮರ್ಥಿಸಿಕೊಂಡ ಮಹಾ ಸರ್ಕಾರ