ಬ್ರಿಟನ್ ನಲ್ಲಿ ಹೆಚ್ಚುತ್ತಿರುವ ಪುರುಷರ ಮೇಲಿನ ರೇಪ್’ಗಳು! – News Mirchi

ಬ್ರಿಟನ್ ನಲ್ಲಿ ಹೆಚ್ಚುತ್ತಿರುವ ಪುರುಷರ ಮೇಲಿನ ರೇಪ್’ಗಳು!

ಪುರುಷರು ಮಹಿಳೆಯರ ಜೊತೆ ಬಲವಂತವಾಗಿ ಸೆಕ್ಸ್ ನಲ್ಲಿ ಪಾಲ್ಗೊಂಡರೆ ಅತ್ಯಾಚಾರ ಎನ್ನುತ್ತೇವೆ. ಆದರೆ ಬ್ರಿಟನ್ ನಲ್ಲಿ ಅತ್ಯಾಚಾರದ ಮತ್ತೊಂದು ರೂಪ ಬೆಳಕಿಗೆ ಬಂದಿದೆ. ಮಹಿಳೆಯರು ಒತ್ತಾಯಪೂರ್ವಕವಾಗಿ ಪುರುಷರನ್ನು ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತಿದ್ದಾರೆ ಎಂದು ಲ್ಯಾಂಕ್ಸ್ಟರ್ ಯೂನಿವರ್ಸಿಟಿ ನಡೆಸಿದ ಸಂಶೋಧನೆ ಹೇಳುತ್ತಿದೆ. ಪುರುಷರ ಮೇಲಿನ ರೇಪ್ ಗಳ ಕುರಿತು ನಡೆಸಿದ ಮೊದಲ ಸಂಶೋಧನೆ ಇದಾಗಿದೆ.

ವಿವಾದಕ್ಕೆ ಕಾರಣವಾದ ಮುಸ್ಲಿಂ ಸಚಿವನ “ಜೈಶ್ರೀರಾಮ್” ಘೋಷಣೆ

ಪುರುಷರನ್ನು ತಮ್ಮೊಂದಿಗೆ ಒತ್ತಾಯಪೂರ್ವಕವಾಗಿ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಮಹಿಳೆಯರು ವಿವಿಧ ತಂತ್ರಗಳನ್ನು ಅನುಸರಿಸುತ್ತಿದ್ದಾರಂತೆ. ಬ್ಲಾಕ್ ಮೇಲ್ ಮಾಡುವುದು, ಆಯುಧಗಳನ್ನು ತೋರಿಸಿ ಬೆದರಿಕೆ ಹಾಕುವುದು, ಸುಳ್ಳು ಹೇಳುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು ಮತ್ತು ಸುಳ್ಳು ಸುದ್ದಿಗಳನ್ನು ಹರಡುವುದಾಗಿ ಬೆದರಿಸುವುದು ಮುಂತಾದ ತಂತ್ರಗಳಿಂದ ಪುರುಷರೊಂದಿಗೆ ಸೆಕ್ಸ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರಂತೆ. ಅಭ್ಯಾಸವಿಲ್ಲದಿದ್ದರೂ ಒತ್ತಾಯಪೂರ್ವಕವಾಗಿ ಡ್ರಗ್ಸ್ ನೀಡಿ ತಮ್ಮ ದಾರಿಗೆ ಸೆಳೆಯುವ ಮಾರ್ಗ ಹೆಚ್ಚು ಬಳಕೆಯಲ್ಲಿದೆಯಂತೆ. ಇಂತಹ ಕೃತ್ಯಗಳನ್ನು ಬ್ರಿಟನ್ ನಲ್ಲಿ ಅತ್ಯಾಚಾರ ಎಂದು ಪರಿಗಣಿಸುವುದಿಲ್ಲವಾದ್ದರಿಂದ, ಸಂಶೋಧನೆಯಲ್ಲಿ ಇಂತಹ ಕೃತ್ಯಗಳಿಗೆ “ಫೋರ್ಸ್ಡ್ ಟು ಪೆನೆಟ್ರೇಟ್” ಎಂದು ಕರೆದಿದ್ದಾರೆ.

ಪುರುಷರ ಸಮ್ಮತಿಯಿಲ್ಲದೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಅಸಾಧ್ಯ ಮತ್ತು ಮಹಿಳೆಯರಿಗಿಂತ ಪುರುಷರು ಶಕ್ತಿವಂತರಾಗಿ ಕಾಣುತ್ತಾರೆ. ಆದ್ದರಿಂದ ಮಹಿಳೆಯರು ಪುರಷರ ಮೇಲೆ ಇಂತಹ ವಿಷಯಗಳಲ್ಲಿ ಬಲಪ್ರಯೋಗ ಮಾಡಲು ಸಾಧ್ಯವಿಲ್ಲ ಮತ್ತು ಸೆಕ್ಸ್ ಅನ್ನು ಪುರುಷರು ಸದಾ ಆನಂದಿಸುತ್ತಾರೆ ಎಂದು ಬಹುತೇಕರ ನಂಬಿಕೆ. ಆದ್ದರಿಂದ ಇಂತಹ ಘಟನೆಗಳು ಹೆಚ್ಚಾಗಿ ಹೊರಗೆ ಬರದೆ ರಹಸ್ಯವಾಗಿಯೇ ಉಳಿದುಬಿಡುತ್ತವೆ ಎಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ.

ಬಡತನದ ಕಾರಣಕ್ಕೆ ಅತ್ಯಾಚಾರ ನಡೆಸಿದವನನ್ನೇ ಮದುವೆಯಾದ ಅಪ್ರಾಪ್ತ ಬಾಲಕಿ

Loading...