ಸಣ್ಣ ನೋಟುಗಳಿಗೆ ಹೊಸ ಡಿಸೈನ್

ಹೊಸ 2 ಸಾವಿರ, 500 ರ ನೋಟುಗಳಲ್ಲಿನ ಡಿಸೈನ್, ಭದ್ರತಾ ವೈಶಿಷ್ಟ್ಯಗಳನ್ನು ಉಳಿದ ನೋಟುಗಳಲ್ಲೂ ಜಾರಿಗೆ ತರುತ್ತೇವೆ ಕೇಂದು ಸಚಿವ ಅರ್ಜುನ್ ರಾಮ್ ಮೇಘವಾಲ್ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಇದರಿಂದ ನಕಲಿ ನೋಟುಗಳ ಚಲಾವಣೆ ಕಡಿಮೆಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಮತ್ತೊಂದು ಕಡೆ ಶೀಘ್ರದಲ್ಲೇ ಮಹಾತ್ಮಾ ಗಾಂಧಿ ಸರಣಿಯ ಭಾಗವಾಗಿ ರೂ. 500 ರ ನೋಟುಗಳನ್ನೂ ಬಿಡುಗಡೆ ಮಾಡುವುದಾಗಿ ರಿಸರ್ವ್ ಬ್ಯಾಂಕ್ ಹೇಳಿದೆ. ಈ ನೋಟುಗಳ ಕ್ರಮಸಂಖ್ಯೆಗಳ ಬಳಿ ‘ಇ’ ಎಂಬ ಆಂಗ್ಲ ಅಕ್ಷರ ಇರುತ್ತದೆ, ನೋಟಿನ ಮತ್ತೊಂದು ಕಡೆ ಸ್ವಚ್ಛ ಭಾರತ ಚಿಹ್ನೆ ಮುದ್ರಿಸಲಾಗುತ್ತದೆ ಎಂದು ಹೇಳಿದೆ. ಕೆಲ ಬ್ಯಾಂಕ್ ನೋಟುಗಳಿಗೆ ಹೆಚ್ಚುವರಿಯಾಗಿ ನಂಬರ್ ಪ್ಯಾನಲ್ ಗಳಲ್ಲಿ(ಸ್ಟಾರ್) ಗುರುತಿರುತ್ತದೆ ಎಂದು ಹೇಳಿದೆ.

ಸ್ಟಾರ್ ಗುರುತಿನೊಂದಿಗೆ ರೂ. 500 ರ ನೋಟು ಮೊದಲ ಬಾರಿ ಜಾರಿ ಮಾಡುತ್ತಿದ್ದು, ಸ್ಟಾರ್ ಗುರುತಿನೊಂದಿಗೆ ಇರುವ ರೂ. 10, ರೂ‌ 20, ರೂ. 50, ರೂ. 100 ನೋಟುಗಳು ಈಗಾಗಲೇ ಚಲಾವಣೆಯಲ್ಲಿವೆ ಎಂದು ಆರ್.ಬಿ.ಐ ಹೇಳಿದೆ. ಆಧಾರ್ ಲಿಂಕ್ಡ್ ಡಿಜಿಟಲ್ ಪಾವತಿಗಳಿಗಾಗಿ ಶೀಘ್ರದಲ್ಲಿಯೇ ಹೊಸ ಮೊಬೈಲ್ ಆಪ್ ಬಿಡುಗಡೆಆಡುತ್ತಿದ್ದೇವೆ ಎಂದು ಕೇಂದ್ರ ಐಟಿ, ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದರು.

ಇ-ಪಾವತಿಗಳ ಕುರಿತು ದೇಶಾದ್ಯಂತ ತರಬೇತಿ ಕಾರ್ಯಕ್ರಮಗಳನ್ನು ಆರಂಭಿಸಲಾಗುತ್ತದೆ. ಯುಪಿಐ(ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್) ಗಾಗಿ ಮೊಬೈಲ್ ಆಪ್ ಅನ್ನು ಅಭಿವೃದ್ಧಿಗೊಳಿಸುತ್ತಿದ್ದೇವೆ. ಎರಡು ಮೂರು ದಿನಗಳಲ್ಲಿ ಇದು ಲಭ್ಯವಾಗಲಿದೆ ಎಂದರು.

Related News

Loading...

Leave a Reply

Your email address will not be published.

error: Content is protected !!