ಪ್ರತಿಪಕ್ಷಗಳ ಒಗ್ಗಟ್ಟು ಕಲ್ಪನೆ… 2019ರಲ್ಲೂ ಬಿಜೆಪಿ ಎಂದ ಒಮರ್ ಅಬ್ದುಲ್ಲಾ – News Mirchi

ಪ್ರತಿಪಕ್ಷಗಳ ಒಗ್ಗಟ್ಟು ಕಲ್ಪನೆ… 2019ರಲ್ಲೂ ಬಿಜೆಪಿ ಎಂದ ಒಮರ್ ಅಬ್ದುಲ್ಲಾ

ಒಗ್ಗಟ್ಟು ಎನ್ನುವುದು ಪ್ರತಿಪಕ್ಷಗಳಲ್ಲಿ ಕೇವಲ ಕಲ್ಪನೆಯಾಗಿದ್ದು, ಮುಂದಿನ 2019 ರ ಲೋಕಸಭಾ ಚುನಾವಣೆಯಲ್ಲೂ ಇದು ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಅನುಕೂಲ ಮಾಡಿಕೊಡುತ್ತದೆ ಎಂದು ಜಮ್ಮೂ ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ಮುಂದಿನ ಬಾರಿಯೂ ಬಿಜೆಪಿಯೇ ಗೆಲ್ಲಲಿದೆ ಎಂದು ಒಮರ್ ಅಬ್ದುಲ್ಲಾ ಭವಿಷ್ಯ ನುಡಿದಿರುವುದು ಇದೇ ಮೊದಲಲ್ಲ, 2019 ರ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಕನಸನ್ನು ಪ್ರತಿಪಕ್ಷಗಳು ಮರೆತು, 2024 ಲೋಕಸಭೆ ಚುನಾವಣೆ ಕಡೆ ಗಮನ ಹರಿಸಬೇಕು ಎಂದು ಉತ್ತರ ಪ್ರದೇಶದಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ನಂತರ ಹೇಳಿದ್ದರು.

ಹಲ್ಲಿನ ಹಳದಿ ಕಲೆಯನ್ನು ಹೋಗಲಾಡಿಸಲು 5 ಮನೆಮದ್ದು

ಗುಜರಾತ್ ನಲ್ಲಿ ರಾಜ್ಯಸಭಾ ಚುನಾವಣೆಗೆ ಒಂದು ದಿನ ಮೊದಲು ಒಮರ್ ಈ ಹೇಳಿಕೆ ನೀಡಿದ್ದಾರೆ. ಕಳೆದ ಬಾರಿ ನಡೆದ ರಾಜ್ಯಸಭೆ ಚುನಾವಣೆ ಈ ಮಟ್ಟಕ್ಕೆ ದೇಶದ ಗಮನ ಸೆಳೆದಿರಲಿಲ್ಲ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಸಂಕಷ್ಟದ ಪರಿಸ್ಥಿತಿಯಲ್ಲಿದೆ ಎಂದ ಜೈರಾಮ್ ಹೇಳಿಕೆಗೆ ಪ್ರತಿಕ್ರಿಯಿಸಿದ ಒಮರ್, ಜೈರಾಮ್ ರಮೇಶ್ ಅವರ ಮಾತುಗಳನ್ನು ಗಂಭೀರವಾಗಿ ತೆಗೆದುಕೊಂಡು ವಿಶ್ಲೇಷಿಸುವಂತಹವರು ಹಿರಿಯ ಪಕ್ಷ ಕಾಂಗ್ರೆಸ್ ನಲ್ಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

Click for More Interesting News

Loading...
error: Content is protected !!