ಯುದ್ಧ ಬೇಕೆನ್ನುವವರಿಗೆ ಗನ್ ಕೊಟ್ಟು ಬಾರ್ಡರ್ ಗೆ ಕಳುಹಿಸಬೇಕು: ಸಲ್ಮಾನ್ – News Mirchi

ಯುದ್ಧ ಬೇಕೆನ್ನುವವರಿಗೆ ಗನ್ ಕೊಟ್ಟು ಬಾರ್ಡರ್ ಗೆ ಕಳುಹಿಸಬೇಕು: ಸಲ್ಮಾನ್

ಭಾರತ ಮತ್ತು ಪಾಕಿಸ್ತಾನ ಸಂಬಂಧ ಸುಧಾರಿಸಲು ಮಾತುಕತೆಯೇ ಪರಿಹಾರ ಎಂದಿರುವ ಬಾಲಿವುಡ್ ನಟ ಸಲ್ಮಾನ್ ಖಾನ್, ಎರಡೂ ರಾಷ್ಟ್ರಗಳ ಸಂಬಂಧ ಉತ್ತಮಗೊಳ್ಳುವ ಆಶಾವಾದ ವ್ಯಕ್ತಪಡಿಸಿದ್ದಾರೆ. ಯುದ್ಧವಾದಾಗಲೆಲ್ಲಾ ಎರಡೂ ಕಡೆಯ ಸೈನಿಕರು ಸಾಯುತ್ತಾರೆ. ಯಾರೆಲ್ಲಾ ಯುದ್ಧ ಬೇಕೆನ್ನುತ್ತಿದ್ದಾರೋ ಅವರ ಕೈಗೆ ಗನ್ ಕೊಟ್ಟು ಗಡಿಗೆ ಹೋರಾಡಲು ಕಳುಹಿಸಬೇಕು, ಒಂದೇ ದಿನದಲ್ಲಿ ಅವರ ಕೈಕಾಲು ನಡುಗುತ್ತವೆ. ತಮ್ಮ ನಿಲುವು ಬದಲಿಸಿಕೊಂಡು ಮಾತುಕತೆ ಬಗ್ಗೆ ಒಲವು ವ್ಯಕ್ತಪಡಿಸುತ್ತಾರೆ ಎಂದು ಸಲ್ಮಾನ್ ಹೇಳಿದ್ದಾರೆ.

ಸಲ್ಮಾನ್ ಸಹೋದರ ಮತ್ತು ನಟ ಸೊಹೇಲ್ ಖಾನ್ ಕೂಡಾ ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿ ನೆಲೆಸಬೇಕಾದರೆ ಮಾತುಕತೆಯೊಂದೇ ಪರಿಹಾರ ಎಂದು ಹೇಳಿದರು. ಸಲ್ಮಾನ್ ಖಾನ್ ತಂದೆ ಸಲೀಮ್ ಖಾನ್ ಇದೇ ರೀತಿಯ ಭಾವನೆ ವ್ಯಕ್ತಪಡಿಸಿದ್ದಾರೆ.

ಸಲ್ಮಾನ್ ಹೇಳಿಕೆ ಕುರಿತು ಗಂಭೀರ ಚರ್ಚೆಗಳು ಆರಂಭವಾಗಿದ್ದು, ಸುಖಾಸುಮ್ಮನೆ ಕಾಲುಕೆರೆದು ಜಗಳಕ್ಕೆ ಬರುತ್ತಿರುವ, ಉಗ್ರರನ್ನು ಗಡಿ ನುಸುಳಲು ನೆರವು ನೀಡುತ್ತಿರುವ ಪಾಕಿಸ್ತಾನದೊಂದಿಗೆ ಎಂತಹಾ ಮಾತುಕತೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಸಲ್ಮಾನ್ ಖಾನ್ ನಟನೆಯ ಟ್ಯೂಬ್ ಲೈಟ್ ಚಿತ್ರ ಪ್ರಚಾರಕ್ಕೆ ಇದೊಂದು ಗಿಮಿಕ್ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Loading...