ವಾಸಿಸಲು ಯೋಗ್ಯವಾದ 20 ಹೊಸ ಗ್ರಹಗಳ ಪತ್ತೆ

ಭೂಮಿಯ ಸುತ್ತಮುತ್ತ ವಾಸಿಸಲು ಯೋಗ್ಯವಾಗಿರುವ 20 ಹೊಸ ಗ್ರಹಗಳನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ನಾಸಾದ ಕೆಪ್ಲರ್ ಟೆಲಿಸ್ಕೋಪ್ ನ ಮಾಹಿತಿಯನ್ನು ಪರಿಶೀಲಿಸಿ ಅವರು ಇದನ್ನು ಪತ್ತೆ ಹಚ್ಚಿದ್ದಾರೆ. ಸೂರ್ಯನಂತಹ ನಕ್ಷತ್ರಗಳ ಸುತ್ತಾ ಈ ಗ್ರಹಗಳು ಸುತ್ತುತ್ತಿವೆ. ಇವುಗಳಲ್ಲಿ ‘ಕೆಒಐ-7923.01’ ಎಂಬ ಗ್ರಹ ಗಾತ್ರದಲ್ಲಿ ಬಹುತೇಕ ಭೂಮಿಯಷ್ಟೇ ಇದ್ದು, ಸೂರ್ಯನಿಂದ ಭೂಮಿಗಿಂತ ದೂರ ಇರುವ ಕಾರಣ ಭೂಮಿಗಿಂತ ಶೀತವಾತಾವರಣ ಇಲ್ಲಿರಲಿದೆ ಎನ್ನಲಾಗುತ್ತಿದೆ.

ಬಾಹ್ಯಾಕಾಶ ನೌಕೆಯನ್ನು ಕಳುಹಿಸಲು ಯಾವುದಾದರೂ ಗ್ರಹವನ್ನು ಆಯ್ಕೆ ಮಾಡಿಕೊಳ್ಳಲು ಇದು ಒಳ್ಳೆಯ ಆಯ್ಕೆ ಎಂದು ಕೆಪ್ಲರ್ ತಂಡದ ಮುಖ್ಯಸ್ಥರು ಹೇಳಿದ್ದಾರೆ. ಆದರೂ ಈಗ ಪತ್ತೆ ಹಚ್ಚಿರುವ ಮಾಹಿತಿಗಳನ್ನು ದೃಢೀಕರಿಸಲು ಮತ್ತಷ್ಟು ಪರಿಶೀಲನೆಗಳನ್ನು ನಡೆಸುವ ಅಗತ್ಯತೆ ಇದೆ ಎಂದು ಕೆಪ್ಲರ್ ತಂಡ ಹೇಳಿದೆ.

Get Latest updates on WhatsApp. Send ‘Add Me’ to 8550851559