ಮೋದಿ ಕೈ ಕುತ್ತಿಗೆ ಕತ್ತರಿಸುವವರೂ ಬಹಳಷ್ಟು ಜನರಿದ್ದಾರೆ: ರಾಬ್ರಿದೇವಿ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಎತ್ತುವ ಬೆರಳು ಅಥವಾ ಕೈಗಳನ್ನು ಕತ್ತರಿಸಬೇಕು ಎಂದ ಬಿಹಾರ ಬಿಜೆಪಿ ರಾಜ್ಯಾಧ್ಯಕ್ಷ ನಿತ್ಯಾನಂದ್ ರಾಯ್ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಇನ್ನು ನಿತ್ಯಾನಂದ ರಾಯ್ ಹೇಳಿಕೆ ಬೆನ್ನಲ್ಲೇ ಬಿಹಾರ ಮಾಜಿ ಮುಖ್ಯಮಂತ್ರಿ ರಾಬ್ರಿದೇವಿ ಪ್ರತಿಕ್ರಿಯಿಸಿದ್ದು, ಧೈರ್ಯವಿದ್ದರೆ ಕತ್ತರಿಸಿ ತೋರಿಸಿ ಎಂದು ಬಿಜೆಪಿಗೆ ಸವಾಲು ಹಾಕಿದ್ದಾರೆ. ಮತ್ತೊಂದು ಹೆಜ್ಜೆ ಮುಂದೆ ಹೋಗಿ ಪ್ರಧಾನಿ ಮೋದಿ ಕೈ, ಕುತ್ತಿಗೆ ಕತ್ತರಿಸುವವರೂ ಬಹಳ ಜನ ಇದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಲಾಲೂ ಪ್ರಸಾದ್ ಯಾದವ್ ಅವರನ್ನು ಹತ್ತನೇ ಬಾರಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಸೇರಿದ್ದ ಸಭೆಯಲ್ಲಿ ರಾಬ್ರಿದೇವಿ ಮಾತನಾಡುತ್ತಿದ್ದರು.

ನಿತ್ಯಾನಂದ್ ರಾಯ್ ಹೇಳಿದ್ದೇನು?

ಬಾಲ್ಯದಿಂದ ಮೋದಿಯವರು ಪಟ್ಟ ಶ್ರಮದ ಕುರಿತು ಕನು ಸಮುದಾಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿತ್ಯಾನಂದ್ ರಾಯ್ ಮಾತನಾಡುತ್ತಿದ್ದರು. ಮೋದಿಯವರು ಬಡವ್ಯಕ್ತಿಯ ಮಗ, ಅವರನ್ನು ಗೌರವಿಸಬೇಕು, ಯಾವುದೇ ಕೈ ಅಥವಾ ಬೆರಳು ಅವರ ವಿರುದ್ಧ ಎತ್ತಿದರೆ ಅವುಗಳನ್ನು ಮುರಿಯಬೇಕು ಅಥವಾ ಕತ್ತರಿಸಬೇಕು ಎಂದು ಹೇಳಿದ್ದರು.

ಇದನ್ನೂ ಓದಿ: ಬನ್ಸಾಲಿಯದ್ದೂ ಕಡಿಮೆ ಅಪರಾಧವೇನಲ್ಲ: ಯೋಗಿ ಆದಿತ್ಯನಾಥ್

ಆದರೆ ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಎಚ್ಚೆತ್ತ ರಾಯ್, ತಮ್ಮ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಮತ್ತು ನನ್ನ ಮಾತುಗಳನ್ನು ಹಿಂತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

Get Latest updates on WhatsApp. Send ‘Add Me’ to 8550851559