ಪಾಕಿಸ್ತಾನದೊಂದಿಗೆ ಮಾತುಕತೆ ಬಿಟ್ಟು ಬೇರೆ ಮಾರ್ಗವಿಲ್ಲ: ಮೆಹಬೂಬಾ ಮುಫ್ತಿ

ಭಾರತ ಮತ್ತು ಪಾಕ್ ನಡುವೆ ಮಾತುಕತೆಯ ಅಗತ್ಯವಿದೆ ಎಂದು ಜಮ್ಮೂ ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಒತ್ತಿ ಹೇಳಿದ್ದಾರೆ. ಮಾತುಕತೆ ಹೊರತು ಪಡಿಸಿ ಬೇರೆ ದಾರಿಯಿಲ್ಲ, ಪ್ರತಿ ದಿನ ರಾಜ್ಯದಲ್ಲಿ ಜನರು ಸಾಯಲು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಜಮ್ಮು ಕಾಶ್ಮಿರ ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನದ ಕೊನೆಯ ದಿನ ಮಾತನಾಡುತ್ತಿದ್ದ ಅವರು, ನಾವು 1947, 1965, 1971 ರಲ್ಲಿ ಮೂರು ಯುದ್ಧಗಳನ್ನು ಪಾಕ್ ವಿರುದ್ಧ ಮಾಡಿದ್ದೇವೆ. ಮೂರೂ ಯುದ್ಧಗಳಲ್ಲಿ ನಾವು ಗೆದ್ದಿದ್ದೇವೆ. ಕಾರ್ಗಿಲ್ ಯುದ್ಧವನ್ನೂ ಗೆದ್ದಿದ್ದೇವೆ. ಆದರೆ ನಮ್ಮ ಮೂಲ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಮಾತುಕತೆಯ ಹೊರತು ಈ ಸಮಸ್ಯೆ ಪರಿಹಾರಕ್ಕೆ ಬೇರೆ ಮಾರ್ಗವಿಲ್ಲ ಎಂದು ಹೇಳಿದ್ದಾರೆ.

ಶೇ. 81 ರಷ್ಟು ಮುಖ್ಯಮಂತ್ರಿಗಳು ಕೋಟ್ಯಾಧಿಪತಿಗಳು, ಆಂಧ್ರ ಸಿಎಂ ಮೊದಲಿಗ, ಮಾಣಿಕ್ ಸರ್ಕಾರ್ ಬಡ ಸಿಎಂ

ಪಾಕಿಸ್ತಾನದೊಂದಿಗೆ ಮಾತುಕತೆಗೆ ಮುಂದಾಗಬೇಕೆಂದು ಯಾರು ಹೇಳಿದರೂ, ಅವರನ್ನು ರಾಷ್ಟ್ರ ವಿರೋಧಿಗಳಂತೆ ಕಾಣುತ್ತಿದ್ದಾರೆ. ನಾನು ಈ ಮಾತು ಹೇಳಿದರೂ ನನ್ನ ರಾಷ್ಟ್ರವಿರೋಧಿ ಎನ್ನುತ್ತಾರೆ, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರು ಹೇಳಿದರೂ ರಾಷ್ಟ್ರವಿರೋಧಿ ಪಟ್ಟ ಕಟ್ಟುತ್ತಾರೆ. ಜನ ಸತ್ತರೆ ಸಾಯಲಿ, ಮಾತುಕತೆ ಬೇಡ ಎಂದು ಹೇಳಬೇಕಾ ಎಂದು ಅವರು ಪ್ರಶ್ನಿಸಿದ್ದಾರೆ.

ರಾಷ್ಟ್ರೀಯ ಮಾಧ್ಯಮಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಮೆಹಬೂಬಾ ಮುಫ್ತಿ, ಕೆಲವು ಮಾಧ್ಯಮಗಳು ಮಾತುಕತೆಯ ಮಾತೆತ್ತಿದರೂ ದೇಶದ್ರೋಹಿಗಳಂತೆ ಬಿಂಬಿಸುತ್ತವೆ ಎಂದು ಆರೋಪಿಸಿದರು.

ಉದ್ದೇಶಪೂರ್ವಕವಾಗಿ ಕೆಲವು ಚಾನೆಲ್ ಗಳು ಕಾಶ್ಮೀರದಲ್ಲಿ ಯಾರಿಗೂ ಪರಿಚಯವೇ ಇಲ್ಲದಂತಹ, ಭಾರತದ ವಿರುದ್ಧ ಮಾತನಾಡುವಂತಹ ಜನರನ್ನು ಕರೆದು ಚಾನೆಲ್ ನಲ್ಲಿ ಚರ್ಚೆಗೆ ಕೂರಿಸುತ್ತಾರೆ. ಹಾಗೆ ಬಂದವರು ಅಸಾಂವಿಧಾನಿಕ ಭಾಷೆಯನ್ನು ಬಳಸುತ್ತಾರೆ, ಭಾರತದ ವಿರುದ್ಧ ಮಾತನಾಡುತ್ತಾರೆ, ಅಂತಹವರೇ ಕೆಲವು ಮಾಧ್ಯಮಗಳಿಗೆ ಬೇಕಾಗಿರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಟಿವಿ ಚಾನೆಲ್ ಗಳು ಜಮ್ಮೂ ಕಾಶ್ಮೀರ ಪದವನ್ನು ತಮ್ಮ ಟಿ.ಆರ್.ಪಿ ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳುತ್ತಿವೆ ಎಂದು ಅವರು ಆರೋಪಿಸಿದರು.

ಗಂಟಲಿನಲ್ಲಿ ಅವಲಕ್ಕಿ ಸಿಕ್ಕಿಹಾಕಿಕೊಂಡು ಮಗು ಸಾವು

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಲಾಹೋರಿಗೆ ಬಸ್ ಕಳುಹಿಸಿದ್ದು, ಪಾಕ್ ಅಧ್ಯಕ್ಷ ಪರ್ವೇಜ್ ಮುಷರಫ್ ಅವರೊಂದಿಗೆ ಆಗ್ರಾದಲ್ಲಿ ಮಾತುಕತೆಗೆ ಮುಂದಾಗಿದ್ದನ್ನು ಮೆಹಬೂಬಾ ಮುಫ್ತಿ ನೆನಪಿಸಿದರು. ಅದೇ ವಾಜಪೇಯಿಯವರು ಅಂದು ಮಾಡಿದ ಕೆಲಸವನ್ನು ಇಂದು ಮಾಡಿದ್ದರೆ ಈ ಜನ ಏನು ಹೇಳುತ್ತಿದ್ದರು ಎಂದು ನೆನಸಿಕೊಂಡರೆ ಆಶ್ಚರ್ಯವಾಗುತ್ತದೆ ಎಂದು ಹೇಳಿದರು.

Get Latest updates on WhatsApp. Send ‘Subscribe’ to 8550851559