ಗೂಂಡಾ, ರೌಡಿಗಳೆಲ್ಲಾ ರಾಜ್ಯ ಬಿಟ್ಟು ಹೋಗಿ, ಇಲ್ಲವಾದರೆ ಜೈಲಲ್ಲೇ ಜೀವನ

ಗೋರಖ್‌ಪುರ: ಉತ್ತರಪ್ರದೇಶದಲ್ಲಿ ಗೂಂಡಾ ರೌಡಿ ಎಂಬ ಪದಗಳು ಇನ್ನು ಕೇಳಿಸುವುದಿಲ್ಲ. ಕ್ರಿಮಿನಲ್ ಗಳು, ಅಂತಹವರನ್ನು ಪೋಷಿಸುವವರು ರಾಜ್ಯ ಬಿಟ್ಟು ಹೋಗುವುದು ಒಳ್ಳೆಯದು. ಇಲ್ಲವಾದರೆ ಜೈಲಿನಲ್ಲಿ ಜೀವನ ನಡೆಸಬೇಕಿರುತ್ತದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎಚ್ಚರಿಸಿದ್ದಾರೆ.

ಉತ್ತರಪ್ರದೇಶವನ್ನು ಉತ್ತಮ ಪ್ರದೇಶವನ್ನಾಗಿ. ಮಾಡುವುದೇ ತಮ್ಮ ಗುರಿ ಎಂದು ಹೇಳಿದ್ದ ಯೋಗಿ, ಸದ್ಯ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಈಗ ಉತ್ತರಪ್ರದೇಶಕ್ಕೆ ತುಂಬಾ ಕೆಟ್ಟ ಹೆಸರಿದೆ, ಇದರಿಂದ ಕ್ಲೀನ್ ಮಾಡಲು ಜನರು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವುದು, ಮಹಿಳೆಯರ ಮೇಲಿನ ದಾಳಿಗಳನ್ನು ತಡೆಗಟ್ಟುವ ಮೂಲಕ ಮಹಿಳೆಯರಲ್ಲಿನ ಅಭದ್ರತಾ ಭಾವವನ್ನು ತೊಲಗಿಸುತ್ತೇವೆ ಎಂದು ಆದಿತ್ಯನಾಥ್ ಹೇಳಿದರು.

ನಮ್ಮ ಸರ್ಕಾರ ಹೇಗೆ ಕೆಲಸ ಮಾಡುತ್ತದೆ ಎಂಬುದು ಎರಡು ತಿಂಗಳುಗಳಲ್ಲಿ ನಿಮಗೇ ಅರ್ಥವಾಗುತ್ತದೆ. ಜನ ನೀಡಿದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತೇವೆ. ರಾಜ್ಯದಲ್ಲಿರುವ ಕಸವನ್ನು ಕ್ಲೀನ್ ಮಾಡುತ್ತೇವೆ ಎಂದರು.

Related News

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache