ಉಪ್ಪಿನ ಕೊರತೆ ಇಲ್ಲವೇ ಇಲ್ಲ

ನವದೆಹಲಿ: ದೇಶದಲ್ಲಿ ಪ್ರತಿ ರಾಜ್ಯದಲ್ಲೂ ಅಗತ್ಯಕ್ಕೆ ಬೇಕಾದಷ್ಟು ಉಪ್ಪು ಲಭ್ಯವಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಗೃಹಬಳಕೆಯ ಉಪ್ಪಿನ ಕೊರತೆ ಉಂಟಾಗಿದೆ ಎಂದು ಆಂಧ್ರಪ್ರದೇಶ, ತೆಲಂಗಾಣ, ದೆಹಲಿ, ಉತ್ತರಪ್ರದೇಶ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಏಕಾಏಕಿ ಉಪ್ಪಿನ ಕೊರತೆಯ ವದಂತಿಗಳು ಹಬ್ಬಿದ್ದರಿಂದ ಜನರು ಆತಂಕಗೊಂಡಿದ್ದಾರೆ.

ಆದರೆ ಅದೆಲ್ಲಾ ಕೇವಲ ವದಂತಿ ಅಷ್ಟೇ, ಸುಳ್ಳು ಪ್ರಚಾರ ನಡೆಯುತ್ತಿದೆ, ದೇಶದಲ್ಲಿ ಎಲ್ಲೂ ಉಪ್ಪಿನ ಕೊರತೆಯಿಲ್ಲ ಎಂದು ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ನಿರ್ಮಲಾ ಸೀತಾರಾಮನ್ ಶನಿವಾರ ಸ್ಪಷ್ಟಪಡಿಸಿದರು.