ಚೀನಾದ ಈ ನಕಲಿ ಪದಾರ್ಥಗಳು ನಿಮ್ಮನ್ನು ಕೊಲ್ಲಬಹುದು |News Mirchi

ಚೀನಾದ ಈ ನಕಲಿ ಪದಾರ್ಥಗಳು ನಿಮ್ಮನ್ನು ಕೊಲ್ಲಬಹುದು

ವಿಶ್ವಾದ್ಯಂತ ಚೀನಾದ ತಿಂಡಿಗಳು ಜನರಿಗೆ ಪ್ರೀತಿಪಾತ್ರವಾಗಿದೆ. ಭಾರತೀಯರೂ ಚೀನಾದ ತಿಂಡಿಗಳನ್ನು ಇಷ್ಟಪಡುತ್ತಾರೆ ಎಂಬುದಕ್ಕೆ ರಸ್ತೆ ಬದಿಯ ಚೀನಾ ತಿಂಡಿಗಳನ್ನು ಮಾರುವ ತಳ್ಳುವ ಗಾಡಿಗಳೇ ಸಾಕ್ಷಿ. ಹಲವು ಚೀನಾ ತಿಂಡಿಗಳು ಭಾರತೀಯರ ರುಚಿಗೆ ತಕ್ಕಂತೆ ಪರಿವರ್ತನೆಯಾಗಿವೆ, ಆದರೂ ಅವುಗಳ ಮಹತ್ವ ಕಡಿಮೆಯಾಗಿಲ್ಲ.

ಆದರೆ ನಾವೆಲ್ಲಾ ಗಮನಿಸಬೇಕಾದದ್ದು ಚೀನಾದ ಅಗ್ಗದ ವಸ್ತುಗಳ ಜೊತೆ ಕಳಪೆ ಗುಣಮಟ್ಟ ಮತ್ತು ಆರೋಗ್ಯಕ್ಕೆ ಅಪಾಯಕಾರಿ ಆಗಿರುವುದರಲ್ಲಿ ಚೀನಾದ ಆಹಾರ ಪದಾರ್ಥಗಳದ್ದು ಸಿಂಹಪಾಲು.

2009 ರಲ್ಲಿ ಮೆಲಮಿನ್ ಎಂಬ ಕೈಗಾರಿಕಾ ರಾಸಾಯನಿಕ ಬಲಸಿದ ಮಕ್ಕಳ ಹಾಲಿನ ಪುಡಿಯನ್ನು ಸೇವಿಸಿ ಹಲವು ಮಕ್ಕಳು ಅಸುನೀಗಿದ ಬಳಿಕ, ಈ ಅಪಾಯಕಾರಿ ಪ್ಲಾಸ್ಟಿಕ್ ಅಹಾಎ ಪದಾರ್ಥ ವಿಶ್ವದ ಗಮನ ಸೆಳೆಯಿತು. ಇಂತಹ ಹತ್ತು ಅಪಾಯಕಾರಿ ಚೀನಾ ಆಹಾರ ಪದಾರ್ಥಗಳನ್ನು ನಿಮಗಿಂದು ಪರಿಚಯಿಸಲಿದ್ದೇವೆ.

ಮೊಟ್ಟೆ
ಇತ್ತೀಚೆಗೆ ಚೀನಾದ ಕೃತಕ ಮೊಟ್ಟೆಗಳು ಸದ್ದು ಮಾಡುತ್ತಿವೆ. ಅಗ್ಗದ ಬಣ್ಣರಹಿತ ಜಿಲಟಿನ್ ಮತ್ತು ಕೃತಕ ಬಣ್ಣಗಳು, ಮೇಣ ಮತ್ತು ನೀರನ್ನು ಈ ಮೊಟ್ಟೆ ತಯಾರಿಕೆ ಪ್ರಕ್ರಿಯೆಯಲ್ಲಿ ಬಳಸಲಾಗುತ್ತದೆ. ಮೊಟ್ಟೆಯ ಹೊರ ಕವಚವನ್ನು ಕ್ಯಾಲ್ಷಿಯಂ ಕಾರ್ಬೊನೇಟ್ ಬಳಸಿ ತಯಾರಿಸುತ್ತಾರೆ. ಇಂತಹ ಮೊಟ್ಟೆಗಳನ್ನು ಸೇವಿಸುವುದರಿಂದ ನೆನಪಿನ ಶಕ್ತಿ ಕಳೆದುಕೊಳ್ಳುವುದು ಮತ್ತು ಬುದ್ದಿಮಾಂದ್ಯತೆ ಉಂಟಾಗುತ್ತದೆ.

ಅಕ್ಕಿ
ಚೀನಾದ ಪ್ರಮುಖ ಆಹಾರ ಪದಾರ್ಥ ಅಕ್ಕಿಯೂ ಅಲ್ಲಿನ ಜನರ ಹಣ ದಾಹಕ್ಕೆ ಬಳಕೆಯಾಗುತ್ತಿದೆ. ಈ ನಕಲಿ ಅಕ್ಕಿಯನ್ನು ಪ್ಲಾಸ್ಟಿಂಕ್ ಅಂಸವಿರುವ ಕೈಗಾರಿಕೆಗಳ ತ್ಯಾಜ್ಯಗಳನ್ನು ಬೆರೆಸಿದ ಆಲೂಗಡ್ಡೆಗಳಿಂದ ತಯಾರಿಸಲಾಗುತ್ತದೆ. ಇಂತಹ ಅಕ್ಕಿಯನ್ನು ಬಳಸುವುದು ಜೀವಕ್ಕೇ ಹಾನಿಕರ. ಇಂತಹ ಮೂರು ಬಟ್ಟಲು ಅಕ್ಕಿ ಸೇವಿಸುವುದು ಒಂದು ಪ್ಲಾಸ್ಟಿಕ್ ಚೀಲ ತಿನ್ನುವುದಕ್ಕೆ ಸಮ. ಇದು ಜೀರ್ಣವಾಗುವುದೂ ಕಷ್ಟ. ಇದರ ಸೇವನೆ ಕ್ಯಾನ್ಸರ್ ಗೆ ದಾರಿ.

ವಾಲ್ನಟ್(ಆಕ್ರೋಟ)
ಚೀನಾದ ಮಾರುಕಟ್ಟೆಗಳಲ್ಲಿ ಸಿಮೆಂಟ್ ಬೆರೆಸಿದ ವಾಲ್ನಟ್ ಗಳನ್ನು ಮಾರುತ್ತಿದ್ದುದು ಪತ್ತೆಯಾಗಿತ್ತು. ಒಳಗಿನ ಭಾಗವನ್ನು ಹೊರತೆಗೆದು ಸಿಮೆಂಟ್ ಹೊಂದಿರುವ ಕಾಗದವನ್ನು ತುಂಬಿಸಿ ಅದನ್ನು ಅನುಮಾನ ಬರದಂತೆ ಕವರ್ ಮಾಡುತ್ತಾರೆ. ಅದರಿಂದ ತೆಗೆಯಲಾದ ಒಳಗಿನ ಅಸಲಿ ಬೀಜದ ಭಾಗವನ್ನು ಹಾಗೆಯೇ ಬಿಡಿಯಾಗಿ ಮಾರುತ್ತಾರೆ.

ಬೀಫ್
ಚೀನಾದಲ್ಲಿ ಹಂದಿ ಮಾಸಕ್ಕೆ ಬೆಲೆ ಕಡಿಮೆ, ಅದರೆ ದನದ ಮಾಂಸ ದುಬಾರಿ. ಈ ದುಬಾರಿ ದನದ ಮಾಂಸವನ್ನೂ ಕೃತಕವಾಗಿ ತಯಾರಿಸಿ ಹಣ ಮಾಡಿಕೊಳ್ಳುತ್ತಿದ್ದಾರೆ. ಹಂದಿ ಮಾಸವನ್ನೇ ದನದ ಮಾಂಸದ ರುಚಿ ಬರುವಂತೆ ಪರಿವರ್ತಿಸಿ ಮಾರುತ್ತಾರೆ.

ವೈನ್
ಚೀನಾದಲ್ಲಿ ನಕಲಿ ವೈನ್ ಸರ್ವೇ ಸಾಮಾನ್ಯವಾಗಿದೆ. ಮಾಮೂಲಿ ಹಣ್ಣಿನ ರಸ ಮತ್ತು ಅಲ್ಕೋಹಾಲ್ ಬೆರೆಸಿ ತಯಾರಿಸಿದ ನಕಲಿ ವೈನ್ ಅನ್ನು ದುಬಾರಿ ಬಾಟಲಿಗಳಲ್ಲಿ ತುಂಬಿಸಿ ಶ್ರೀಮಂತ ಗ್ರಾಹಕರನ್ನು ಯಾಮಾರಿಸುತ್ತಾರೆ.

ಜೇನುತುಪ್ಪ
ಇಷ್ಟೆಲ್ಲಾ ಪದಾರ್ಥಗಳನ್ನು ನಕಲು ಮಾಡುವವರು ಜೇನು ತುಪ್ಪವನ್ನು ಬಿಟ್ಟಾರೆಯೇ? ಸದ್ಯಕ್ಕೆ ವೈದ್ಯಕೀಯ ಬಳಕೆಗೆ ವಿಶ್ವಾದ್ಯಂತ ಜೇನುತುಪ್ಪಕ್ಕೆ ಭಾರೀ ಬೇಡಿಕೆಯಿದೆ. ಚೀನಾದಲ್ಲಿ ದೊರೆಯುವ ಜೇನುತುಪ್ಪದಲ್ಲಿ ಎರಡು ವಿಧ. ಶುಗರ್ ಬೀಟ್ರೂಟ್ ಅಥವಾ ರೈಸ್ ಸಿರಪ್, ಮತ್ತೊಂದು ಜೇನುತುಪ್ಪದಂತೆಯೇ ಕಾಣುವಂತೆ ಆಲಮ್(ಪಟಿಕ), ಸಕ್ಕರೆ, ಬಣ್ಣ ಮತ್ತು ನೀರನ್ನು ಬೆರೆಸಿ ತಯಾರಿಸಿರುವುದು.

Loading...
loading...
error: Content is protected !!