ರಾಷ್ಟ್ರಪತಿ ರೇಸಲ್ಲಿ ಸುಷ್ಮಾ ಸ್ವರಾಜ್ ಹೆಸರು: ಸ್ಪಷ್ಟನೆ ನೀಡಿದ ಸಚಿವೆ – News Mirchi

ರಾಷ್ಟ್ರಪತಿ ರೇಸಲ್ಲಿ ಸುಷ್ಮಾ ಸ್ವರಾಜ್ ಹೆಸರು: ಸ್ಪಷ್ಟನೆ ನೀಡಿದ ಸಚಿವೆ

ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ಎನ್.ಡಿ.ಎ ಅಭ್ಯರ್ಥಿಯಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೆಸರು ಬಲವಾಗಿ ಕೇಳಿಬರುತ್ತಿರುವುದರಿಂದ ಈ ಕುರಿತು ಸುಷ್ಮಾ ಸ್ವರಾಜ್ ಸ್ಪಂದಿಸಿದ್ದಾರೆ. ರಾಷ್ಟ್ರಪತಿ ಚುನಾವಣೆಯಲ್ಲಿ ತಾವು ಅಭ್ಯರ್ಥಿಯಾಗುವ ಕುರಿತು ಬರುತ್ತಿರುವ ಸುದ್ದಿಗಳು ಕೇವಲ ವದಂತಿಗಳು ಇದರಲ್ಲಿ ಸತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಜುಲೈ ತಿಂಗಳು 17 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿವೆ. ಆದರೂ ಇತ್ತ ಆಡಳಿತ ಬಿಜೆಪಿ ಮತ್ತು ಪ್ರತಿಪಕ್ಷಗಳು ತಮ್ಮ ಅಭ್ಯರ್ಥಿಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನು ಪ್ರಕಟಿಸಿದೆ ಸಸ್ಪೆನ್ಸ್ ಕಾಯ್ದುಕೊಂಡಿವೆ. ರಾಷ್ಟ್ರಪತಿ ಚುನಾವಣಾ ರೇಸಿನಲ್ಲಿ ಹಲವು ಹೆಸರುಗಳು ಕೇಳಿಬರುತ್ತಿವೆ. ಅದರಲ್ಲಿ ಸುಷ್ಮಾ ಸ್ವರಾಜ್ ಅವರ ಹೆಸರು ಕೂಡಾ ಇದ್ದು, ಬಿಜೆಪಿ ಮತ್ತು ಆರ್.ಎಸ್.ಎಸ್ ಆಪ್ತ ಮೂಲಗಳ ಪ್ರಕಾರ ಸುಷ್ಮಾ ಸ್ವರಾಜ್ ಹೆಸರು ಬಹುತೇಕ ಅಂತಿಮಗೊಂಡಿದ್ದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಅವು ಕೇವಲ ವದಂತಿಗಳು. ನಾನು ಪ್ರಸ್ತುತ ವಿದೇಶಾಂಗ ಸಚಿವೆ. ರಾಷ್ಟ್ರಪತಿ ಅಭ್ಯರ್ಥಿ ಕುರಿತ ನಿಮ್ಮ ಪ್ರಶ್ನೆ ಆಂತರಿಕ ವಿಷಯ ಎಂದು ಸುಷ್ಮಾ ಸ್ವರಾಜ್ ಮಾಧ್ಯಮಗಳಿಗೆ ಹೇಳಿದರು.

Contact for any Electrical Works across Bengaluru

Loading...
error: Content is protected !!