ನಿಮ್ಮ ಮನೆಗೆ ಆರೋಗ್ಯ, ಐಶ್ವರ್ಯ ತರುವ ಗಿಡಗಳಿವು..

ಇಂದಿನ ದಿನಗಳಲ್ಲಿ ಮನೆಯ ಅಂದವನ್ನು ಹೆಚ್ಚಿಸುತ್ತವೆ ಎಂಬ ಕಾರಣಕ್ಕೆ ಬಹುತೇಕ ಜನ ತಮ್ಮ ಮನೆಯೊಳಗೆ ಮತ್ತು ಮನೆಯ ಆವರಣಗಳಲ್ಲಿ ಗಿಡಗಳು ಮತ್ತು ಸಣ್ಣ ಮರಗಳನ್ನು ಬೆಳೆಸಲು ಇಷ್ಟಪಡುತ್ತಾರೆ. ಮರಗಿಡಗಳು ನಮಗೆ ಬೇಕಾದ ಶುದ್ಧ ಆಮ್ಲಜನಕ ನೀಡುತ್ತದೆ. ಅದರ ಜೊತೆಗೆ ಮರ ಗಿಡಗಳು ಆರೋಗ್ಯ, ಸಮೃದ್ಧಿ ಮತ್ತು ಐಶ್ವರ್ಯ ನೀಡುತ್ತದೆ ಎಂದು ನಮ್ಮಲ್ಲಿ ನಂಬಲಾಗಿದೆ. ಆದರೆ ನೀವಯ ಯಾವುದೋ ಒಂದು ಗಿಡವನ್ನು ಬೆಳೆಸುವ ಮೂಲಕ ಮನೆಯಲ್ಲಿ ಮೇಲಿನ ಉಪಯೋಗಗಳನ್ನು ಪಡೆಯಬಯಬಹುದು ಎನ್ನಲಾಗದು.

ಮನೆಯಲ್ಲಿ ಆರೋಗ್ಯ, ಐಶ್ವರ್ಯ ವೃದ್ಧಿಗಾಗಿ ಬೆಳೆಸಲು ಗಿಡಗಳನ್ನು ಆಯ್ಕೆ ಮಾಡುವಾಗ ಮತ್ತು ಅದನ್ನು ಯಾವ ದಿಕ್ಕಿನಲ್ಲಿಡಬೇಕು ಎಂಬುದರ ಬಗ್ಗೆಯೂ ತುಂಬಾ ಜಾಗರೂಕರಾಗಿರಬೇಕು. ವಾಸ್ತು ಶಾಸ್ತ್ರ ಪ್ರಕಾರ ಕೆಲ ನಿರ್ದಿಷ್ಟ ಸಸಿಗಳನ್ನು ನೀವು ಮನೆಯಲ್ಲಿಡಲೇಬಾರದು, ಮತ್ತೆ ಕೆಲವೊಂದು ಸಸಿಗಳು ಮನೆಯಲ್ಲಿಟ್ಟರೆ ಒಳ್ಳೆಯದಾಗುತ್ತದೆ.

ಇಲ್ಲಿ ನಿಮ್ಮ ಮನೆಗೆ ಸುಖ ಸಮೃದ್ಧಿಯನ್ನು ನೀಡುವ ಕೆಲ ಸಸ್ಯಗಳ ಬಗ್ಗೆ ತಿಳಿಸಲಾಗಿದೆ… ಓದಿ..

1. ತುಳಸಿ ಗಿಡ: ಈ ತುಂಬಾ ಮಂಗಳಕರ ಗಿಡವಾಗಿದ್ದು, ಮನೆಯಲ್ಲಿಟ್ಟರೆ ತುಂಬಾ ಒಳ್ಳೆಯದು. ಹಿಂದೂ ಸಂಸ್ಕೃತಿಯ ಪ್ರಕಾರ, ಪ್ರತಿಯೊಂದು ಮನೆಯೂ ಒಂದು ತುಳಸಿ ಗಿಡವನ್ನು ಬೆಳೆಸಿ ಪ್ರತಿದಿನ ಪೂಜಿಸಬೇಕು. ಈ ಗಿಡವನ್ನು ನೀವು ಮನೆಯಲ್ಲಿ ಉತ್ತರ ದಿಕ್ಕಿನಲ್ಲಿ ಬೆಳೆಸಬೇಕು. ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಬೆಳೆಸಬಹುದು. ಮಹಿಳೆಯರು ಮುಟ್ಟಾದಾಗ ತುಳಸಿ ಗಿಡದಿಂದ ದೂರವಿರಬೇಕು.

2. ಅದೃಷ್ಟದ ಬಿದಿರು : ಈಗೀಗ ಎಲ್ಲಾ ಅಂಗಡಿಗಳು ಮತ್ತು ಮನೆಗಳಲ್ಲಿ ನಮಗೆ ಹೆಚ್ಚಾಗಿ ಕಂಡುಬರುವುದು ಲಕ್ಕೀ ಬಿದಿರು ಸಸ್ಯ. ಇದನ್ನು ಮನೆಯಲ್ಲಿಟ್ಟರೆ ಮನೆಯಲ್ಲಿ ಶಾಂತಿ ಮತ್ತು ಅದೃಷ್ಟ ನೆಲೆಸುತ್ತದೆ ಎಂದು ನಂಬಲಾಗಿದೆ. ಬಿದಿರಿನ ಬೊನ್ಸಾಯ್ ಗಿಡಗಳನ್ನು (ದೊಡ್ಡ ಮರಗಳಂತೆ ಕಾಣುವ ಚಿಕ್ಕ ಗಿಡಗಳು) ಬೆಳೆಸಬಾರದು. ಮತ್ತು ಹಳದಿ ಬಣ್ಣದ ತೊಗಟೆ ಇರುವ ಮತ್ತು ಗಾಢ ಹಸಿರು ಬಣ್ಣದ ಎಲೆಗಳಿರುವ ಬಿದಿರು ಸಸ್ಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

3. ಮನೀ ಪ್ಲಾಂಟ್
ವಾಸ್ತು ಶಾಸ್ತ್ರದ ಪ್ರಕಾರ ಮನೀ ಪ್ಲಾಂಟ್ ಎಂಬ ಮತ್ತೊಂದು ಸಸ್ಯವಿದೆ. ಹೆಸರೇ ಹೇಳುವಂತೆ ಇದು ನಿಮ್ಮ ಆದಾಯ ಮಟ್ಟವನ್ನು ಉತ್ತಮಗೊಳಿಸುವುದಲ್ಲದೆ ಮನೆಗೆ ಐಶ್ವರ್ಯ ತರುತ್ತದೆ. ಈ ಗಿಡವನ್ನು ನೀವು ಪೂರ್ವ ಅಥವಾ ಈಶಾನ್ಯ ದಿಕ್ಕುಗಳಲ್ಲಿ ಇಡಬಹುದು.

4. ಬೇವಿನ ಮರ
ಇದು ತನ್ನ ಔಷಧೀಯ ಗುಣಗಳಿಗೆ ಪ್ರಸಿದ್ಧಿ ಪಡೆದಿದೆ. ಈ ಗಿಡವಿರುವ ತೋಟಗಳಲ್ಲಿ ಸಕಾರಾತ್ಮಕ ಶಕ್ತಿ ಉತ್ಪಾದನೆಯಾಗುತ್ತದೆ ಎಂದೂ ನಂಬಲಾಗಿದೆ. ನಿಮ್ಮ ಮನೆಯ ಬಳಿಯೇ ಬೆಳೆಸಬೇಕೆಂದರೆ ಸಣ್ಣ ಬೇವಿನ ಗಿಡವನ್ನು ಬೆಳೆಸಬಹುದು.

5. ಬಾಳೆ ಮರ
ಉತ್ತಮ ಆರೋಗ್ಯ ಮತ್ತು ಮಾನಸಿಕ ಶಾಂತಿಗಾಗಿ ನೀವು ಬಾಳೆ ಮರವನ್ನು ಮನೆಯ ಬಳಿ ಬೆಳೆಸಬಹುದು. ಹಿಂದೂ ಸಂಸ್ಕೃತಿಯಲ್ಲಿ ಬಾಳೆ ಮರವನ್ನು ಗುರುವಾರಗಳಂದು ವಿಷ್ಣುವಿನೊಂದಿಗೆ ಪೂಜಿಸುತ್ತಾರೆ. ಇದನ್ನು ಈಶಾನ್ಯ ದಿಕ್ಕಿನಲ್ಲಿ ಮಾತ್ರ ಬೆಳಸಬೇಕು.

ಮನೆಗೆ ಶುಭ ತರಬಲ್ಲ ವಾಸ್ತು ಸಸ್ಯಗಳಲ್ಲಿ ಕೆಲವನ್ನು ಓದಿದಿರು. ಬಹುತೇಕ ಗಿಡಮರಗಳನ್ನು ಈಶಾನ್ಯ ದಿಕ್ಕಿನಲ್ಲಿಯೇ ಬೆಳೆಸುತ್ತಾರೆ. ನಿಮಗೆ ಎಲ್ಲಿ ನೆಡಬೇಕು ಎಂಬ ಗೊಂದಲವಿದ್ದರೆ, ಮನೆಯಲ್ಲಿ ನಕಾರಾತ್ಮಕ ಅಂಶಗಳು ಕಾಣಿಸುವ ಮೊದಲೇ ತಿಳಿದವರ ಬಳಿ ಮಾಹಿತಿ ಪಡೆದು ಹೆಜ್ಜೆ ಇಡಿ.