ರದ್ದಾದ ನೋಟುಗಳನ್ನು ಬಿಟ್ಟು ಹೋದ ಕಳ್ಳರು

ರದ್ದಾದ ಹಳೇ ನೋಟುಗಳು ಕಳ್ಳರಿಗೂ ಬೇಡವಾಗಿದೆ. ಕಳ್ಳತನಕ್ಕೆ ಮನೆಯೊಂದಕ್ಕೆ ನುಗ್ಗಿದ ಕಳ್ಳರು, ಚಿನ್ನಾಭರಣ ಮಾತ್ರ ಎತ್ತಿಕೊಂಡು, ರದ್ದಾದ 500, 1000 ದ ನೋಟುಗಳನ್ನು ಮನೆಯಲ್ಲೆಲ್ಲಾ ಚೆಲ್ಲಿ ಹೋದ ಚೆನ್ನೈನಲ್ಲಿ ನಡೆದಿದೆ.

ಚೆನ್ನೈ ಹೊರವಲಯದ ವೇಪ್ಪಂಬಟ್ಟು ಎಂಬಲ್ಲಿ ವಾಸವಿರುವ ನಿವೃತ್ತ ವಾಯುಸೇನೆ ಅಧಿಕಾರಿ ಸ್ಟಾನ್ಲಿ ಸೆಲ್ವಂ ಬುಧವಾರ ಮನೆಗೆ ಬೀಗ ಹಾಕಿ ಕುಟುಂಬ ಸದಸ್ಯರೊಂದಿಗೆ ಟಿ ನಗರದ ಅತ್ತೆಯ ಮನೆಗೆ ಹೋಗಿದ್ದರು. ಗುರುವಾರ ಮನೆಗೆ ವಾಪಸಾಗಿ ನೋಡಿದಾಗ ಬಾಗಿಲಿನ ಬೀಗ ಒಡೆದಿತ್ತು. ಬೀರುವಿನಲ್ಲಿ ಇಟ್ಟಿದ್ದ ಚಿನ್ನಾಭರಣ ಮಾಯವಾಗಿತ್ತು. ಆದರೆ ರೂ. 500, 1000 ಮುಖಬೆಲೆಯ ಸುಮಾರು 95 ಸಾವಿರ ಹಣ ಮನೆಯಲ್ಲೆಲ್ಲಾ ಚೆಲ್ಲಿತ್ತು.