ಗುರ್ಮೀತ್ ರಾಮ್ ರಹೀಮ್ ಗೆ ಏಕಿಷ್ಟು ಜನ ಬೆಂಬಲ ಗೊತ್ತೇ? |News Mirchi

ಗುರ್ಮೀತ್ ರಾಮ್ ರಹೀಮ್ ಗೆ ಏಕಿಷ್ಟು ಜನ ಬೆಂಬಲ ಗೊತ್ತೇ?

ಡೇರಾ ಸಚ್ಚಾ ಸೌದಾ ಎಂಬ ಸಿಖ್ ಧಾರ್ಮಿಕ ಸಂಘಟನೆಯ ಮುಖ್ಯಸ್ಥ ಬಾಬಾ ಗುರ್ಮೀತ್ ರಾಮ್ ರಹೀಮ್ ಸಿಂಗ್. ಈ ಸಂಘಟನೆಯ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಇವರು ನಡೆಸುತ್ತಿದ್ದಾರೆ. ಪಂಜಾಬ್ ಮತ್ತು ಹರಿಯಾಣಗಳಲ್ಲಿ ಲಕ್ಷಾಂತರ ಕೆಳವರ್ಗದ ಜನರು ಗುರ್ಮೀತ್ ಅವರನ್ನು ದೇವರಂತೆ ಭಾವಿಸುತ್ತಾರೆ. 2002 ರಲ್ಲಿ ಗುರ್ಮೀತ್ ವಿರುದ್ಧ ಹತ್ಯೆ, ಅತ್ಯಾಚಾರ ಪ್ರಕರಣ ದಾಖಲಾಯಿತು. ಆದರೂ ಗುರ್ಮೀತ್ ಅವರನ್ನು ಪೂಜಿಸುವವರ ಸಂಖ್ಯೆಯಲ್ಲಿ ಕಡಿಮೆಯಾಗಿಲ್ಲ. ಇದಕ್ಕು ಹಲವಾರು ಕಾರಣಗಳಿವೆ…

ಪಂಜಾಬ್ ಮತ್ತು ಹರಿಯಾಣಗಳಲ್ಲಿ ಹಿಂದುಳಿದ ವರ್ಗಗಳ ಜನರು ಸಮಾಜದಲ್ಲಿನ ತಾರತಮ್ಯವನ್ನು ತಾಳಲಾರದೆ ಈ ಡೇರಾ ಸಚ್ಚಾ ಸೌದಾದಲ್ಲಿ ಸೇರುತ್ತಿರುತ್ತಾರೆ. ಇದರಲ್ಲಿ ಸೇರಿದವರನ್ನು ಡೇರಾಗಳು ಎಂದು ಕರೆಯುತ್ತಾರೆ. ಮಧ್ಯಯುಗದಲ್ಲಿಯೇ ಉತ್ತರ ಭಾರತದಲ್ಲಿ ಡೇರಾಗಳು ಆರಂಭವಾದವು. ಡೇರಾ ಸಚ್ಚಾ ಸೌದಾವನ್ನು 1948 ರಲ್ಲಿ ಮಸ್ತಾನಾ ಬೆಲೂಚಿಸ್ತಾನಿ ಎಂಬ ಗುರುವು ಸ್ಥಾಪಿಸಿದರು. ಅವರ ಬೋಧನೆಗಳಿಗೆ ಲಕ್ಷಾಂತರ ಜನ ಆಕರ್ಷಿತರಾದರು. ಈ ಸಂಪ್ರದಾಯದಲ್ಲಿ ಯಾವುದೇ ಜಾತಿ ಗೋಡೆಗಳಿಲ್ಲ. ಹೀಗಾಗಿ ಹಲವಾರು ಕೆಳವರ್ಗದ ಜನರು ಡೇರಾ ಸಚ್ಚಾ ಸೌದಾದಲ್ಲಿ ಸೇರಿದರು.

[ಇದನ್ನೂ ಓದಿ: ಇಂದು ಗುರ್ಮೀತ್ ರೇಪ್ ಕೇಸ್ ತೀರ್ಪು : ಎರಡು ರಾಜ್ಯಗಳಲ್ಲಿ ಮೊಬೈಲ್ ಇಂಟರ್ನೆಟ್ ಬಂದ್]

ಪ್ರಾರ್ಥನೆಗಳಿಗಾಗಿ “ನಾಮ್ ಚರ್ಚಾ ಘರ್” ಗಳನ್ನು ಸ್ಥಾಪಿಸಿದರು. ಇದರಲ್ಲಿ ಧನಿಕನಾದರೂ, ಬಡವನಾದರೂ ಒಂದೇ ರೀತಿ ನೋಡುತ್ತಾರೆ. ಪಂಜಾಬ್, ಹರಿಯಾಣಗಳಲ್ಲಿ ಮೇಲ್ವರ್ಗದ ಪ್ರಾಬಲ್ಯ ಹೆಚ್ಚಾಗಿರುವುದರಿಂದ ಲಕ್ಷಾಂತರ ಜನ ದಲಿತರು ಡೇರಾ ಪಂಗಡವನ್ನು ಸ್ವೀಕರಿಸಿದರು. ಡೇರಾ ಸಚ್ಚಾ ಸೌದಾವನ್ನು ಘಟಕಗಳಂತೆ ವಿಭಜಿಸಲಾಗಿದೆ. ಪ್ರತಿ ಘಟಕಕ್ಕೆ ಭಂಗೀದಾಸ್ ಜವಾಬ್ದಾರಿ ಹೊರುತ್ತಾರೆ. ಸದಸ್ಯರ ಸಮಸ್ಯೆಗಳನ್ನು ತಿಳಿದುಕೊಂಡು ಸಿರ್ಸಾದ ಕೇಂದ್ರ ಕಛೇರಿಗೆ ತಲುಪಿಸುವುದು ಇವರ ಪ್ರಮುಖ ಕೆಲಸ. ಅನಾರೋಗ್ಯದಿಂದ ಬಳಲುತ್ತಿರುವವರ ಬಗ್ಗೆ ತಿಳಿಸುವುದರೊಂದಿಗೆ ಅವರನ್ನು ಚಿಕಿತ್ಸೆಗಾಗಿ ಸಿರ್ಸಾಗೆ ಕರೆದೊಯ್ಯುತ್ತಾರೆ. ಇಲ್ಲಿ ಬೃಹತ್ ಆಸ್ಪತ್ರೆಯೊಂದಿದೆ. ಇದರಲ್ಲಿ ಇವರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಾರೆ.

ಡೇರಾಗಳಲ್ಲಿ ಸದಸ್ಯರಿಗೆ ಸಬ್ಸಿಡಿಯೊಂದಿಗೆ ಆಹಾರ ಧಾನ್ಯಗಳನ್ನು ಸರಬರಾಜು ಮಾಡುತ್ತಾರೆ. ಸರ್ಕಾರ ಪಡಿತರ ಮೂಲಕ ಸರಬರಾಜು ಮಾಡುವ ಆಹಾರ ಧಾನ್ಯಗಳಿಗಿಂತ ಇದು ಉತ್ತಮ ಗುಣಮಟ್ಟದಲ್ಲಿರುತ್ತದೆ. ಇಲ್ಲಿ ಯಾವುದೇ ಭ್ರಷ್ಟಾಚಾರ ಕಂಡು ಬರುವುದಿಲ್ಲ. ಇದು ಡೇರಾಗಳಲ್ಲಿನ ಬಡವರಿಗೆ ತುಂಬಾ ಪ್ರಯೋಜನವಾಗುತ್ತದೆ. ಪಂಜಾಬ್ ನಲ್ಲಿನ ಸಂಗ್ರೂರ್, ಬರ್ನಾಲಾ, ಮಾನ್ಸ, ಭಟಿಂಡಾ, ಫಜಿಲ್ಕಾ, ಫರೀದ್ಕೋಟ್, ಫಿರೋಜ್ಪುರ ಜಿಲ್ಲೆಗಳಲ್ಲಿ ಡೇರಾ ಸಮುದಾಯದವರು ಹೆಚ್ಚಾಗಿದ್ದಾರೆ. ಕ್ಯಾನ್ಸರ್ ನಂತರ ಗಂಭೀರ ಖಾಯಿಲೆಗಳಿಗೂ ಸಿರ್ಸಾದಲ್ಲಿ ಉಚಿತ ಚಿಕಿತ್ಸೆ ನೀಡುವುದು ಗಮನಾರ್ಹ. ಇಷ್ಟೆಲ್ಲಾ ಜನಪ್ರಿಯ ಕಾರ್ಯಕ್ರಮಗಳನ್ನು ಕೈಗೊಂಡಿರುವುದರಿಂದಲೇ ಡೇರಾ ಸಚ್ಚಾ ಸೌದಾದಲ್ಲಿ ಲಕ್ಷಾಂತರ ಜನ ಸದಸ್ಯರಾಗಿ ಸೇರಿದ್ದಾರೆ.

Loading...
loading...
error: Content is protected !!