ಇದೇ ಕಾರಣಕ್ಕೆ ಐಸಿಸ್ ಉಗ್ರರು ನೋಕಿಯಾ 105 ಬಳಸುವುದು

ಐಸಿಸ್ ಉಗ್ರರು ನಡೆಸುವ ಬಹುತೇಕ ಬಾಂಬ್ ಸ್ಪೋಟಗಳಲ್ಲಿ ನೋಕಿಯಾ ಮೊಬೈಲ್ ಫೋನ್ ಬಳಕೆಯಾಗುತ್ತಿರುವುದು ಬೆಳಕಿಗೆ ಬಂದಿದೆ. ನೋಕಿಯಾ 105 ಮೊಬೈಲ್ ಎಂದರೆ ಇಸ್ಲಾಮಿಕ್ ಸ್ಟೇಟ್ಸ್ ಸಂಘಟನೆಯ ಅಧಿಕೃತ ಮೊಬೈಲ್ ಎಂಬಂತಾಗಿದೆ.

ಶಸ್ತ್ರಾಸ್ತ್ರ ಮೇಲ್ವಿಚಾರಣಾ ಗ್ರೂಪ್ ಕಾರ್(Conflict Arnament Group) ನಡೆಸಿದ ಅಧ್ಯಯನದಲ್ಲಿ ತಿಳಿದು ಬಂದ ವಿಷಯವೆಂದರೆ ಇಸ್ಲಾಮಿಕ್ ಸ್ಟೇಟ್ಸ್ ಉಗ್ರರು ಬಾಂಬ್ ಗಳನ್ನು ದೂರದಿಂದಲೇ ನಿಯಂತ್ರಿಸಿ ಸ್ಪೋಟಗೊಳಿಸಲು ಇದೇ ಮೊಬೈಲ್ ಅನ್ನು ಬಳಸುತ್ತಿದ್ದಾರೆ.

ಐಸಿಸ್ ಉಗ್ರರು ನೋಕಿಯಾ 105 ಬಳಕೆಗೆ ಕಾರಣ:
ಕಡಿಮೆ ಬೆಲೆಯಲ್ಲಿ, ಸುಲಭವಾಗಿ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ. ಹೆಚ್ಚು ಬಾಳಿಕೆ ಬರುತ್ತದೆ ಮತ್ತು ಬ್ಯಾಟರಿ ಬಾಳಿಕೆ ಹೆಚ್ಚಾಗಿರುತ್ತದೆ ಎಂಬ ಕಾರಣವೂ ಒಂದು. ಈ ಮೊಬೈಲಿನ ವೈಬ್ರೇಷನ್ ತೀವ್ರತೆ ಹೆಚ್ಚು, ಭಯೋತ್ಪಾದಕರು ಬಾಂಬ್ ಸ್ಪೋಟಕ್ಕೆ ಹೆಚ್ಚು ವೈಬ್ರೇಟ್ ಆಗುವ ಮೊಬೈಲುಗಳನ್ನೇ ಬಳಸುತ್ತಾರೆ.

A research conducted by the arms monitoring group CAR (Conflict Armament Research) says that, “Nokia 105” device is always being used by ISIS to trigger remote-controlled explosive devices in the Middle-East.