ನೋಟು ರದ್ದಾದ ನಂತರ ಇದುವರೆಗೂ ಪತ್ತೆಯಾದ ಕಪ್ಪು ಹಣವೆಷ್ಟು ಗೊತ್ತೇ?

ಹಳೆಯ ನೋಟು ರದ್ದಾದ ನಂತರ ದೇಶಾದ್ಯಂತ ಕಪ್ಪು ಹಣವನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸುತ್ತಿರುವ ಆದಾಯ ತೆರಿಗೆ ಇಲಾಖೆ, ಇದುವರೆಗೂ ರೂ.3,300 ಕೋಟಿ ಕಪ್ಪು ಹಣವನ್ನು ಬಯಲಿಗೆಳೆದಿದೆ. ಇದರೊಂದಿಗೆ ರೂ. 92 ಕೋಟಿ ಹೊಸ ಕರೆನ್ಸಿಯನ್ನೂ ಸ್ವಾಧೀನಪಡಿಸಿಕೊಂಡಿದೆ.

ಅಧಿಕೃತ ಮೂಲಗಳ ಪ್ರಕಾರ, ನೋಟು ರದ್ದಾದ ನಂತರ ಇಲ್ಲಿಯವರೆಗೂ ಐಟಿ ಅಧಿಕಾರಿಗಳು 734 ದಾಳಿಗಳನ್ನು ನಡೆಸಿದ್ದಾರೆ. ಅಷ್ಟೇ ಅಲ್ಲದೆ ತೆರಿಗೆ ವಂಚನೆ, ಹವಾಲಾ ವ್ಯಾಪಾರ, ಘೋಷಿಸದ ಆಸ್ತಿ ಇತರೆ ಆರೋಪಗಳಿಗೆ ಸಂಬಂಧಿಸಿದಂತೆ 3,200 ಜನರಿಗೆ ನೋಟೀಸುಗಳನ್ನು ನೀಡಿದೆ.

ದೊಡ್ಡ ಪ್ರಮಾಣದಲ್ಲಿ ನಡೆದ ದಾಳಿಗಳಲ್ಲಿ 500 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ, ನಗದನ್ನು ಈಗಾಗಲೇ ಐಟಿ ಅಧಿಕಾರಿಗಳು ಸ್ವಾಧೀನಪಡಿಸಿಕೊಂಡಿದ್ದಾರೆ. 220 ಗಂಭೀರ ಪ್ರಕರಣಗಳ ತನಿಖೆಯ ಹೊಣೆಯನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳಿಗೆ ನೀಡಿದೆ.

Related News

Comments (wait until it loads)
Loading...
class="clear">