ಜನಸಂಖ್ಯೆ ಏರಿಕೆಗೆ 4 ಪತ್ನಿ, 40 ಮಕ್ಕಳಿಗೆ ಅವಕಾಶ ನೀಡಿದವರೇ‌ ಕಾರಣ

ದೇಶದಲ್ಲಿ ಜನಸಂಖ್ಯೆ ಏರಿಕೆಗೆ ಮುಸ್ಲಿಮರು ಕಾರಣ ಎಂದು ಸಂಸದ ಸಾಕ್ಷಿ ಮಹಾರಾಜ್ ಪರೋಕ್ಷವಾಗಿ ಆರೋಪಿಸಿದರು. ಧರ್ಮದ ಆಧಾರದಲ್ಲಿ ತಾವುದೇ ರಾಜಕಾರಣಿ ಅಥವಾ ರಾಜಕೀಯ ಪಕ್ಷ ಮತಯಾಚನೆ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದ ಎರಡು ದಿನಗಳ ನಂತರ ಸಾಕ್ಷಿ ಮಹಾರಾಜ್ ಈ ಹೇಳಿಕೆ ನೀಡಿದ್ದಾರೆ.

ದೇವಸ್ಥಾನವೊಂದನ್ನು ಉದ್ಘಾಟಿಸುವ ಸಮಾರಂಭದಲ್ಲಿ ಮಾತನಾಡುತ್ತಿದ್ದ ಸಾಕ್ಷಿ ಮಹಾರಾಜ್, “ಭಾರತದಲ್ಲಿ ಜನಸಂಖ್ಯೆ ಏರಿಕೆಯಾಗುತ್ತಿರುವುದು ಹಿಂದುಗಳಿಂದ ಅಲ್ಲ, ಯಾರು 4 ಹೆಂಡತಿಯರು 40 ಮಕ್ಕಳು ಎಂಬ ನೀತಿಗೆ ಬೆಂಬಲಿಸುತ್ತಿದ್ದಾರೋ ಅವರೇ ಕಾರಣ” ಎಂದು ಆರೋಪಿಸಿದರು. ಇದೇ ವೇಳೆ ಅವರು ದೇಶದಲ್ಲಿ ಏಕರೂಪ ನಾಗರೀಕ ಸಂಹಿತೆ ಜಾರಿಗೆ ಒತ್ತಾಯಿಸಿದರು.

ಧರ್ಮದ ಆಧಾರದಲ್ಲಿ ಮತಯಾಚನೆ ಮಾಡಬಾರದು ಎಂಬ ಸುಪ್ರೀಂ ಕೋರ್ಟ್ ಸೂಚನೆಯನ್ನು ಧಿಕ್ಕರಿಸಿದ್ದಾರೆಂಬ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಸಂಸದ, ಅಲ್ಲಿ ಸಾಧು ಸಂತರು ಹಾಜರಿದ್ದರು, ರಾಜಕೀಯಕ್ಕೆ ಸಂಬಂಧಿಸಿದ ವ್ಯಕ್ತಿಗಳಿರಲಿಲ್ಲ. ನನ್ನ ಭಾಷಣದಲ್ಲಿ ಎಲ್ಲೂ ಮತಯಾಚನೆ ಮಾಡಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.