ದೇಶವನ್ನು ಲೂಟಿ ಮಾಡಿದವರು ಮಾತ್ರ ದರೋಡೆಕೋರರ ಬಗ್ಗೆ ಮಾತನಾಡುತ್ತಾರೆ: ರಾಹುಲ್ ವ್ಯಂಗ್ಯಕ್ಕೆ ಮೋದಿ ತಿರುಗೇಟು |News Mirchi

ದೇಶವನ್ನು ಲೂಟಿ ಮಾಡಿದವರು ಮಾತ್ರ ದರೋಡೆಕೋರರ ಬಗ್ಗೆ ಮಾತನಾಡುತ್ತಾರೆ: ರಾಹುಲ್ ವ್ಯಂಗ್ಯಕ್ಕೆ ಮೋದಿ ತಿರುಗೇಟು

ಜಿ.ಎಸ್.ಟಿ (ಸರಕು ಸೇವಾ ತೆರಿಗೆ)ಯನ್ನು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ವ್ಯಂಗ್ಯವಾಡಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ, ದೇಶವನ್ನು ಲೂಟಿ ಮಾಡಿದವರು ಮಾತ್ರ ದರೋಡೆಕೋರರ ಕುರಿತು ಯೋಚಿಸುತ್ತಾರೆ ಎಂದು ಹೇಳಿದ್ದಾರೆ.

ಬಾಲಿವುಡ್ ಜನಪ್ರಿಯ ಚಲನಚಿತ್ರ ‘ಶೋಲೆ’ ಕಳನಾಯಕನ ಹೆಸರನ್ನು ನೆನಪಿಸಿದ್ದ ರಾಹುಲ್ ಗಾಂಧಿ, ಜಿ.ಎಸ್.ಟಿ ಯನ್ನು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಕುಹಕವಾಡಿದ್ದರು.

ಇದನ್ನೂ ಓದಿ: ತೇಜಸ್ ಲಘು ಯುದ್ಧವಿಮಾನಕ್ಕೆ ಸಿಂಗಾಪುರ ರಕ್ಷಣಾ ಸಚಿವರ ಪ್ರಶಂಸೆ

ಗುಜರಾತ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಪ್ರಚಾರವನ್ನು ಮುಂದುವರೆಸಿರುವ ಪ್ರಧಾನಿ ಮೋದಿ, ಕಾಂಗ್ರೆಸ್ ನವರು ಕೈಪಂಪ್ ನಂತಹ ಸಣ್ಣ ಪುಟ್ಟ ಯೋಜನೆಗಳಿಗೂ ಅಪಾರ ರಾಜಕೀಯ ಪ್ರಚಾರ ಪಡೆಯುತ್ತಾರೆ ಎಂದು ಜರಿದ ಮೋದಿ, ಬಿಜೆಪಿ ಜನತೆಯ ಪ್ರಯೋಜನಗಳಿಗಾಗಿ ನರ್ಮದಾ ಯೋಜನೆಯಂತಹ ದೊಡ್ಡ ದೊಡ್ಡ ಯೋಜನೆಗಳನ್ನು ತಂದಿದೆ ಎಂದು ಹೇಳಿದರು.

182 ಸ್ಥಾನಗಳ ಗುಜರಾತ್ ವಿಧಾನಸಭೆಗೆ ಡಿಸೆಂಬರ್ 9 ಮತ್ತು 14 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 18 ರಂದು ಮತ ಎಣಿಕೆ ನಡೆಯಲಿದೆ.

Get Latest updates on WhatsApp. Send ‘Add Me’ to 8550851559

Loading...
loading...
error: Content is protected !!