ಪಕ್ಷ ಬಿಡುವವರು ಕಾರಣ ನೀಡದೆ ಬಿಡಲಿ – News Mirchi

ಪಕ್ಷ ಬಿಡುವವರು ಕಾರಣ ನೀಡದೆ ಬಿಡಲಿ

ಪಕ್ಷ ಬಿಡುತ್ತಿರುವವರು ತಮ್ಮ ನಿರ್ಧಾರಕ್ಕೆ ನೀಡುತ್ತಿರುವ ಕಾರಣಗಳಿಂದ ಬೇಸರಗೊಂಡಿರುವ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಪಕ್ಷ ಬಿಡುವವರು ಬಿಡಲಿ, ಆದರೆ ಯಾವುದೇ ಕಾರಣ ನೀಡದೇ ಹೋಗಲಿ ಎಂದು ಹೇಳಿದ್ದಾರೆ.

ಇತ್ತೀಚೆಗೆ ಪಕ್ಷ ತೊರೆದ ಮೂವರು ವಿಧಾನಪರಿಷತ್ ಸದಸ್ಯರಾದ ಬುಕ್ಕಲ್ ನವಾಬ್, ಸರೋಜಿನಿ ಅಗರ್ವಾಲ್ ಮತ್ತು ಯಶ್ವಂತ್ ಸಿಂಗ್ ಅವರು ಪಕ್ಷದಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ, ಪಕ್ಷದಲ್ಲಿ ತಮ್ಮನ್ನು ಮೂಲೆಗುಂಪು ಮಾಡಲಾಗಿದೆ ಎಂಬಂತಹ ಕಾರಣಗಳನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅಖಿಲೇಶ್ ಯಾದವ್ ಪಕ್ಷ ಬಿಡುವವರು ಯಾವುದೇ ಕಾರಣಗಳನ್ನು ನೀಡದೇ ಹೋಗಲಿ, ಆಗಲಾದರೂ ಕಷ್ಟದ ಸಮಯದಲ್ಲಿ ನನ್ನ ಜೊತೆ ಉಳಿದವರ್ಯಾರು ಎಂಬುದು ತಿಳಿಯುತ್ತದೆ ಎಂದು ಹೇಳಿದ್ದಾರೆ.

ಬುಕ್ಕಲ್ ನವಾಬ್ ಅವರನ್ನು ಈ ಹಿಂದೆ ಭೇಟಿ ಮಾಡಿದ್ದಾಗ ಅವರು ಪಕ್ಷ ಬಿಡುವ ಸೂಚನೆಯೇ ನೀಡಿರಲಿಲ್ಲ ಎಂದ ಅಖಿಲೇಶ್, ನವಾಬ್ ಅವರು ಯಾವುದೋ ಜಮೀನು ವಿವಾದದಲ್ಲಿ ಸಿಲುಕಿದ್ದು, ಪಕ್ಷ ಬಿಡುವಂತೆ ಒತ್ತಡಕ್ಕೆ ಸಿಲುಕಿದರು ಎಂದು ನಮಗೆ ತಿಳಿದು ಬಂದಿದೆ. ಬೇರೆ ಪಕ್ಷದಲ್ಲಿದ್ದ ವ್ಯಕ್ತಿ ಲ್ಯಾಂಡ್ ಮಾಫಿಯಾದವರಂತೆ ಕಾಣುತ್ತಾರೆ, ಅದೇ ವ್ಯಕ್ತಿ ಬಿಜೆಪಿ ಸೇರಿದಾಗ ಪ್ರಾಮಾಣಿಕರಾಗುತ್ತಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

Loading...