Muktheeshwara2

ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಚಿಂತಾಮಣಿಯ ದೇವಾಲಯಗಳಿಗೆ ಹರಿದು ಬಂದ ಭಕ್ತ ಸಾಗರ

ಚಿಂತಾಮಣಿ ಫೆ.13 : ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಚಿಂತಾಮಣಿ ತಾಲ್ಲೂಕಿನ ಹಲವು ದೇವಾಲಯಗಳಿಗೆ ಜನ ಸಾಗರವೇ ಹರಿದು ಬಂದಿತ್ತು.

ಮಹಾಶಿವರಾತ್ರಿ ಹಬ್ಬವಾದು ಇಂದು ಚಿಂತಾಮಣಿ ನಗರದ ನಾಗನಾಥೇಶ್ವರ ಸ್ವಾಮಿ, ಕಾಡುಮಲೇಬೆಟ್ಟದ ಕಾಡುಮಲ್ಲೇಶ್ವರ ಸ್ವಾಮಿ, ನಗರದ ನಾರಸಿಂಹಪೆಟೆಯ ಗ್ರಾಮದೇವತೆ ಗಂಗಾಭವಾನಿ, ಉಪ್ಪರಪೇಟೆಯ ಸೃಷ್ಟೀಶ್ವರಸ್ವಾಮಿ, ಅಂಬಾಜಿ ದುರ್ಗಾ ಬೆಟ್ಟದಲ್ಲಿನ ಗಿರಿಜಾಮಲ್ಲೇಶ್ವರ ಸ್ವಾಮಿ, ದುಷ್ಟ ಸಂಹಾರ ಆಂಜನೇಯ ಸ್ವಾಮಿ, ದಿಗವಕೋಟೆಯ ಶ್ರೀ ವಿಶ್ವೇಶ್ವರಸ್ವಾಮಿ, ಕೈವಾರದ ಭೀಮಲಿಂಗೇಶ್ವರಸ್ವಾಮಿ, ಮುರುಗಮಲ್ಲೆಯ ಮುಕ್ತೀಶ್ವರಸ್ವಾಮಿ, ಹಾಗೂ ತಾಲ್ಲೂಕಿನಾದ್ಯಂತ ಇರುವ ಹಲವು ದೇವಾಲಯಗಳ ದೇವರುಗಳಿಗೆ ಬೆಳಿಗ್ಗೆಯಿಂದಲ್ಲೇ ವಿಶೇಷ ಹೂವಿನ ಅಲಂಕಾರ ಹಾಗೂ ಹೋಮ ಹವನ, ಅಭಿಷೇಕ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಬಾಲಕನನ್ನು ಕೊಂದು ಒಂದು ತಿಂಗಳು ಸೂಟ್ಕೇಸ್ ನಲ್ಲಿ ಬಚ್ಚಿಟ್ಟಿದ್ದ ಐಎಎಸ್ ಆಕಾಂಕ್ಷಿಯ ಬಂಧನ

ಇನ್ನೂ ವಿಶೇಷವಾಗಿ ನಗರದ ನಾರಸಿಂಹಪೇಟೆಯಲ್ಲಿ ನೆಲೆಸಿರುವ ಗಂಗಾಭವಾನಿ ದೇವಾಲಯದಲ್ಲಿ ಗ್ರಾಮದೇವತೆ ಗಂಗಾಭವಾನಿ ಅಮ್ಮನವರಿಗೆ ವಿಶೇಷವಾಗಿ ಶಿವನ ಆಲಂಕಾರವನ್ನು ಮಾಡಲಾಗಿತ್ತು. ನಗರದ ಕಾಡುಮಲ್ಲೇಶ್ವರ ಬೆಟ್ಟದ ಮೇಲೆ ನೆಲೆಸಿರುವ ಕಾಡುಮಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷವಾಗಿ ಹಿಂದೂ ಭಾಂದವರಲ್ಲಿ ಒಗ್ಗಟ್ಟು ಹಾಗೂ ನಮ್ಮ ಸಂಪ್ರದಾಯದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ತಿರುವಣ್ಣಾಮಲೈನಲ್ಲಿ ಬೆಳೆಗಿಸುವ ಮಹಾಶಿವ ಜ್ಯೋತಿ ಮಾದರಿಯ ಜ್ಯೋತಿಯನ್ನು ಕಾಡುಮಲ್ಲೇಶರ ಬೆಟ್ಟದ ಮೇಲೆ ಮಹಾ ಜ್ಯೋತಿಯನ್ನು ಬೆಳಗಿಸಲು ನಗರದ ಪ್ರಮುಖ್ಯ ಬೀದಿಗಳಲ್ಲಿ ಜ್ಯೋತಿಯನ್ನು ಭವ್ಯ ಮೆರವಣಿಗೆ ಮಾಡಲಾಯಿತು.

ಬೆಳಿಗ್ಗೆಯಿಂದಲೇ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ದೇವಾಲಯಗಳಿಗೆ ಆಗಮಿಸಿ ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡಿ ದೇವರ ದರ್ಶನವನ್ನು ಪಡೆದರು. ಇನ್ನೂ ವಿಶೇಷವಾಗಿ ಚಿಂತಾಮಣಿ ತಾಲ್ಲೂಕಿನಾದ್ಯಂತ ಇರುವ ದೇವಾಲಯಗಳಿಗೆ ವಿಶೇಷ ಹೂವಿನ ಆಲಂಕಾರ ಹಾಗೂ ವಿದ್ಯುತ್ ದೀಪಾಲಂಕಾರವನ್ನು ಮಾಡಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ಹಲವು ಗಣ್ಯರು ಚಿಂತಾಮಣಿ ತಾಲ್ಲೂಕಿನ ಹಲವು ದೇವಾಲಯಗಳಿಗೆ ಆಗಮಿಸಿ ವಿಶೇಷ ಪೊಜೆಗಳನ್ನು ಸಲ್ಲಿಸಿ ಉತ್ತಮ ಮಳೆಯಾಗಿ ಉತ್ತಮ ಬೆಳೆಯಾಗಿ ಜನ ಸುಖ ಶಾಂತಿ ನೆಮ್ಮಂದಿಯಿಂದ ಬಾಳಲ್ಲಿಯೆಂದು ದೇವರಲ್ಲಿ ಮೊರೆ ಹೋದರು.

ಶೇ. 81 ರಷ್ಟು ಮುಖ್ಯಮಂತ್ರಿಗಳು ಕೋಟ್ಯಾಧಿಪತಿಗಳು, ಆಂಧ್ರ ಸಿಎಂ ಮೊದಲಿಗ, ಮಾಣಿಕ್ ಸರ್ಕಾರ್ ಬಡ ಸಿಎಂ

ಇನ್ನು ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ದೇವಾಲಯಗಳಲ್ಲಿ ಭಕ್ತಾದಿಗಳಿಂದ ಬೆಳಿಗೆಯಿಂದಲೇ ಹರಿಕಥೆ ಹಾಗೂ ಭಜನಾ ಕಾರ್ಯಕ್ರಮಗಳು ಮೂಡಿಬಂದವು. ಹಾಗೂ ದೇವಾಲಯಗಳಿಗೆ ಅಗಮಿಸಿದ ಎಲ್ಲಾ ಭಕ್ತಾದಿಗಳಿಗೆ ತೀರ್ಥಿ ಪ್ರಸಾದ ವಿನಿಯೋಗ ಹಾಗೂ ಉಚಿತ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಚಿಂತಾಮಣಿ ನಗರದ ಕಾಡು ಮಲ್ಲೇಶ್ವರಸ್ವಾಮಿ ಬೆಟ್ಟದ ತಪ್ಪಲಿನ ಹನುಮಂತ ನಗರದಲ್ಲಿ ನೆಲೆಸಿರುವ ಶ್ರೀ ಮಲ್ಲಿಕಾರ್ಜುನಸ್ವಾಮಿಗೆ ಮಾಘ ಮಾಸದಲ್ಲಿ ಬರುವ ಮಹಾ ಶಿವರಾತ್ರಿ ಪ್ರಯುಕ್ತ ಅಭಿಷೇಕ, ಅಲಂಕಾರ, ಮಹಾ ಮಂಗಳಾರತಿ ನೆರವೇರಿಸಿ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು.

ಚಿಂತಾಮಣಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ನಗರದ ಆರಾಧ್ಯ ದೈವ ನಾಗನಾಥೇಶ್ವರಸ್ವಾಮಿಗೆ ವಿಶೇಷ ಆಲಂಕಾರ.

ಶಿವಾರಾತ್ರಿ ಪ್ರಯುಕ್ತ ತಾಲೂಕಿನ ಮುರಗಮಲ್ಲ ಮುಕ್ತೀಶ್ವರ ದೇವಾಲಯದಲ್ಲಿ ವಿಶೇಷ ಆಲಂಕಾರ ಮಾಡಲಾಗಿತ್ತು.

Get Latest updates on WhatsApp. Send ‘Subscribe’ to 8550851559