ಛತ್ತೀಸ್ ಗಢದಲ್ಲಿ ಎನ್ಕೌಂಟರ್, ಮೂವರು ಮಾವೋವಾದಿಗಳ ಸಾವು – News Mirchi

ಛತ್ತೀಸ್ ಗಢದಲ್ಲಿ ಎನ್ಕೌಂಟರ್, ಮೂವರು ಮಾವೋವಾದಿಗಳ ಸಾವು

ಛತ್ತೀಸ್ಗಡದ ರಾಜ್ ನಂದ್ಗಾವ್ ಜಿಲ್ಲೆಯಲ್ಲಿ ಬುಧವಾರ ಮಧ್ಯರಾತ್ರಿ ಪೊಲೀಸ್ ಮತ್ತು ಮಾವೋವಾದಿಗಳ ನಡುವೆ ಎನ್ಕೌಂಟರ್ ನಡೆಯಿತು. ಎನ್ಕೌಂಟರಿನಲ್ಲಿ ಮೂವರು ನಕ್ಸಲರು ಮೃತಪಟ್ಟಿದ್ದಾರೆ. ಈ ಕಾರ್ಯಾಚರಣೆಯನ್ನು ಟಿಬೆಟಿಯನ್ ಬಾರ್ಡರ್ ಫೋರ್ಸ್ ಮತ್ತು ಛತ್ತೀಸ್ಗಢ ಪೊಲೀಸರು ಜಂಟಿಯಾಗಿ ನಡೆಸಿದರು..

ಕೋಂಡ್ ಗಾವ್ ಪೊಲೀಸ್ ಠಾಣೆಯ ವ್ಯಾಪ್ತಿಯ ಕೋಪೆನ್ ಕಡ್ಕಾ ಗ್ರಾಮದ ಸಮೀಪ ಅರಣ್ಯ ಪ್ರದೇಶದಲ್ಲಿ ಈ ಎನ್ಕೌಂಟರ್ ಸಂಭವಿಸಿದೆ ಎಂದು ಜಿಲ್ಲಾ ಎಸ್ಪಿ ಪ್ರಶಾಂತ್ ಅಗರ್ವಾಲ್ ತಿಳಿಸಿದ್ದಾರೆ. ಮೃತರನ್ನು ಮಹೇಶ್ (ಪಲ್ಲೆಮಾಡಿ ಪ್ರದೇಶ ಸಮಿತಿ ಸದಸ್ಯ), ರಾಕೇಶ್ (ಸ್ಥಳೀಯ ಸಂಘಟನಾ ಸ್ಕ್ವಾಡ್ ಎಸಿಎಂ), ರಂಜಿತ್ ಪಲ್ಲೆಮಡಿ ಉಪ ಕಮಾಂಡರ್ ಗಳು ಎಂದು ಗುರುತಿಸಲಾಗಿದೆ.

[ಆ ಎರಡೂ ರಾಜ್ಯಗಳಲ್ಲಿ ಬಿಜೆಪಿಯದ್ದೇ ಅಲೆ!]

ಸತ್ತ ಮೂವರ ತಲೆಗೂ ತಲಾ ರೂ. 5 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಎಸ್ಪಿ ಹೇಳಿದರು. ಎನ್ಕೌಂಟರ್ ನಡೆದ ಸ್ಥಳದಿಂದ ಮದ್ದುಗುಂಡು, ಒಂದು ಎಕೆ 47, ಒಂದು ಇನ್ಶ್ರಾ ರೈಫಲ್, ಒಂದು ಎಸ್ಎಲ್ಆರ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

Get Latest updates on WhatsApp. Send ‘Add Me’ to 8550851559

Click for More Interesting News

Loading...
error: Content is protected !!