ಚಿಂತಾಮಣಿ: ಗೂಬೆ ಮಾರಾಟಗಾರರ ಬಂಧನ

ಚಿಂತಾಮಣಿ: ಗೂಬೆಗಳನ್ನು ಹಿಡಿದು ಮಾರಾಟ ಮಾಡುತ್ತಿದ್ದ ಮೂವರನ್ನು ಚಿಂತಾಮಣಿ ಮತ್ತು ಶಿಡ್ಲಘಟ್ಟ ಅರಣ್ಯ ವಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರಿಂದ ಮೂರು ಗೂಬೆಗಳನ್ನು ಮತ್ತು ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮುಖ್ಯಮಂತ್ರಿ ಆಗುವಂತೆ ಇಂದಿರಾ ಆಹ್ವಾನಿಸಿದ್ದರು

ಶಿಡ್ಲಘಟ್ಟ ತಾಲ್ಲೂಕಿನ ಗಂಜಿಗುಂಟೆ ಸಮೀಪದ ಹಕ್ಕಿಪಿಕ್ಕಿ ಕಾಲೋನಿಯ ಪ್ರಸಾದ್, ಚಂದ್ರಮೋಹನ್ ಮತ್ತು ಬಾಳೇಗೌಡನ ಹಳ್ಳಿಯ ಮಲ್ಲಯ್ಯ ಎಂಬುವವರನ್ನು ವನ್ಯ ಜೀವಿಗಳ ಸಂರಕ್ಷಣೆ ಕಾಯ್ದೆಯಡಿ ಬಂಧಿಸಿರುವುದಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ.

Get Latest updates on WhatsApp. Send ‘Subscribe’ to 8550851559