ಸೋಫಿಯಾನ್ ಎನ್ಕೌಂಟರ್: ಮೂವರು ಉಗ್ರರ ಹತ್ಯೆ, ಹುತಾತ್ಮರಾದ ಇಬ್ಬರು ಯೋಧರು – News Mirchi

ಸೋಫಿಯಾನ್ ಎನ್ಕೌಂಟರ್: ಮೂವರು ಉಗ್ರರ ಹತ್ಯೆ, ಹುತಾತ್ಮರಾದ ಇಬ್ಬರು ಯೋಧರು

ಕಾಶ್ಮೀರದ ಸೋಫಿಯಾನ್ ಜಿಲ್ಲೆಯಲ್ಲಿ ನಡೆದ ಉಗ್ರರ ವಿರುದ್ಧದ ಕಾರ್ಯಚರಣೆಯಲ್ಲಿ ಇಬ್ಬರು ಯೋಧರು ಮತ್ತು ಮೂವರು ಉಗ್ರರು ಸಾವನ್ನಪ್ಪಿದ್ದಾರೆ. ಶನಿವಾರ ಸಂಜೆ ಕಾರ್ಯಾಚರಣೆ ಆರಂಭವಾದ ಕಾರ್ಯಚರಣೆ ಭಾನುವಾರ ಬೆಳಗ್ಗೆ ಮುಗಿದಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಭಾರತೀಯ ಸೇನೆ ಮತ್ತು ಸ್ಥಳೀಯ ಪೊಲೀಸರು ಉಗ್ರರ ವಿರುದ್ಧ ಅವ್ನೀರ್ ಗ್ರಾಮದಲ್ಲಿ ಶೋಧ ಕಾರ್ಯಚರಣೆ ನಡೆಸಿದ್ದರು. ಈ ವೇಳೆ ಉಗ್ರರು ಭದ್ರತಾ ಪಡೆಗಳತ್ತ ಗುಂಡು ಹಾರಿಸಿದರು. ಉಗ್ರರ ನೆರವಿಗೆ ಬಂದ ಸ್ಥಳೀಯರು ಭದ್ರತಾ ಪಡೆಗಳತ್ತ ಕಲ್ಲು ತೂರಲು ಆರಂಭಿಸಿದರು. ಆದರೂ ಭದ್ರತಾ ಪಡೆಗಳು ಉಗ್ರರನ್ನು ಗುರಿಯಾಗಿಸಿಕೊಂಡು ಪ್ರತಿಯಾಗಿ ಗುಂಡಿನ ದಾಳಿ ನಡೆಸಿದ್ದರು. ಉಗ್ರರು ಅಡಗಿದ್ದ ಕಟ್ಟಡವನ್ನು ಸ್ಪೋಟಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇಂದು ಬೆಳಗ್ಗೆ ಮೂವರು ಉಗ್ರರನ್ನು ಸೋಫಿಯಾನ್ ಜಿಲ್ಲೆಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಎಸ್ಪಿ ವಾಯಿದ್ ಹೇಳಿದ್ದಾರೆ. ಕಾರ್ಯಚರಣೆ ಪೂರ್ಣಗೊಂಡಿದೆಯಾ ಎಲ್ಲವೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕಾರ್ಯಚರಣೆಯಲ್ಲಿ ಇಳಯರಾಜ ಮತ್ತು ಗೊವಾಯಿ ಸುಮೇಧ್ ಎಂಬ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

Loading...