ಜಮ್ಮೂ ಕಾಶ್ಮೀರ: ಮೂವರು ಉಗ್ರರ ಹತ್ಯೆ – News Mirchi

ಜಮ್ಮೂ ಕಾಶ್ಮೀರ: ಮೂವರು ಉಗ್ರರ ಹತ್ಯೆ

ಜಮ್ಮೂ ಕಾಶ್ಮೀರ: ಜಮ್ಮೂ ಕಾಶ್ಮೀರದಲ್ಲಿ ಭಾರೀ ಎನ್ಕೌಂಟರ್ ನಡೆದಿದೆ. ಬುದ್ಗಾಮ್ ಜಿಲ್ಲೆಯಲ್ಲಿ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ದಾಳಿ ನಡೆದಿದ್ದು, ಸೈನಿಕರು ಮೂವರು ಉಗ್ರರನ್ನು ಕೊಂದಿದ್ದಾರೆ. ಸತ್ತ ಉಗ್ರರಿಂದ ಶಸ್ತ್ರಾಸ್ತ್ರಗಳು, ಸ್ಪೋಟಕ ಪದಾರ್ಥಗಳು ವಶಪಡಿಸಿಕೊಂಡಿದ್ದಾರೆ. ಭಯೋತ್ಪಾದಕರ ಶೋಧನಾ ಕಾರ್ಯಾಚರಣೆ ಮುಂದುವರೆದಿದೆ.

ಹತರಾದ ಮೂವರು ಉಗ್ರರು ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಗೆ ಸೇರಿದ್ದವರು ಎನ್ನಲಾಗಿದ್ದು, ಮೂವರ ಗುರುತುಗಳು ಇನ್ನೂ ಪತ್ತೆಯಾಗಿಲ್ಲ.

ಮಂಗಳವಾರ ರಾತ್ರಿ ಸುಮಾರು 7.30 ರ ವೇಳೆಗೆ ಬುದ್ಗಾಮ್ ಜಿಲ್ಲೆಯ ರಾಡ್ಪಗ್ ಗ್ರಾಮದಲ್ಲಿ ಈ ಎನ್ಕೌಂಟರ್ ಸಂಭವಿಸಿದೆ. ಭಾರತೀಯ ಸೇನೆಯ ರಾಷ್ಟ್ರೀಯ ರೈಫಲ್ಸ್, ಸೆಂಟ್ರಲ್ ರಿಸರ್ವ್ ಪೊಲೀಸ್ ಮತ್ತು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ವಿಶೇಷ ಜಂಟಿಯಾಗಿ ಭಯೋತ್ಪಾದಕರಿಗಾಗಿ ಶೋಧ ಕಾರ್ಯಚರಣೆ ನಡೆಸುತ್ತಿದ್ದವು.

ಸೋಮವಾರ ಅಮರನಾಥ ಯಾತ್ರಿಗಳ ಮೇಲೆ ಉಗ್ರರು ದಾಳಿ ನಡೆಸಿ 7 ಯಾತ್ರಿಗಳ ಸಾವಿಗೆ ಕಾರಣವಾದ ಬೆನ್ನಲ್ಲೇ ಈ ಶೋಧ ಕಾರ್ಯಚರಣೆ ಆರಂಭವಾಗಿತ್ತು.

Loading...