ಐಸಿಸ್ ಸಂಘಟನೆಯ ಸಂಪರ್ಕ ಶಂಕೆ, ಕೇರಳದ ಮೂವರ ಬಂಧನ – News Mirchi

ಐಸಿಸ್ ಸಂಘಟನೆಯ ಸಂಪರ್ಕ ಶಂಕೆ, ಕೇರಳದ ಮೂವರ ಬಂಧನ

ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ಸ್ ಗೆ ಸೇರಿ ಸಿರಿಯಾದಲ್ಲಿ ತರಬೇತಿ ಪಡೆಯಲು ದೇಶ ಬಿಟ್ಟು ತೆರಳಿದ್ದ ಮೂವರು ಯುವಕರನ್ನು ಕಣ್ಣೂರು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಮಿದಿಲಾಜ್ ಕೆ.ಸಿ(26), ರಷೀದ್ ಎಂ.ಪಿ(23) ಮತ್ತು ಅಬ್ದುಲ್ ರಜಾಕ್(24) ಬಂಧಿತರು. ದೇಶಕ್ಕೆ ಮರಳಿದ ನಂತರ ನಾಲ್ಕು ತಿಂಗಳ ಕಾಲ ಇವರ ಚಟುವಟಿಕೆಗಳ ಮೇಲೆ ನಿಗಾವಹಿಸಿದ ನಂತರ ಕಣ್ಣೂರು ಪೊಲೀಸ್ ವರಿಷ್ಠಾಧಿಕಾರಿ ಪಿ.ಪಿ.ಸದಾನಂದನ್ ಅವರು ವಿಚಾರಣೆ ನಡೆಸಿದ್ದರು, ನಂತರ ಇವರ ಬಂಧನವಾಗಿದೆ.

ಪೊಲೀಸರ ಪ್ರಕಾರ, ಇಸ್ಲಾಮಿಕ್ ಸ್ಟೇಟ್ಸ್ ಉಗ್ರ ಸಂಘಟನೆ ಸೇರಲು ಮೊದಲು ಟರ್ಕಿಗೆ ಹೋದ ಯುವಕರು, ಅಲ್ಲಿ ಮೂರು ತಿಂಗಳಿದ್ದರು. ಸಿರಿಯಾ ಗಡಿಯೊಳಗೆ ನುಸುಳಲು ಯತ್ನಿಸಿ ಟರ್ಕಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದರು. ಅಲ್ಲಿಂದ ಭಾರತಕ್ಕೆ ವಾಪಸಾದ ನಂತರ ಪೊಲೀಸರು ಇವರ ಚಟುವಟಿಕೆಗಳ ಮೇಲೆ ನಿಗಾವಹಿಸಿದ್ದರು.

Get Latest updates on WhatsApp. Send ‘Add Me’ to 8550851559

Loading...