ಪಾಕಿಸ್ತಾನವನ್ನು ಭಯೋತ್ಪಾದಕ ದೇಶ ಎಂದು ಘೋಷಿಸುವ ಸಮಯ ಬಂದಿದೆ: ರಾಜೀವ್ ಚಂದ್ರಶೇಖರ್

ಭಯೋತ್ಪಾದನೆಯನ್ನು ಮಟ್ಟ ಹಾಕುವ ಉದ್ದೇಶ ಪಾಕಿಸ್ತಾನಕ್ಕೆ ಇರುವಂತೆ ಕಾಣುತ್ತಿಲ್ಲವಾದ್ದರಿಂದ ಭಯೋತ್ಪಾದನೆಯನ್ನು ತಡೆಗಟ್ಟಲು ಮತ್ತಷ್ಟು ಕ್ರಮ ಕೈಗೊಳ್ಳಬೇಕೆಂದು ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಒತ್ತಾಯಿಸಿದ್ದಾರೆ. ಭಯೋತ್ಪಾದನೆಯನ್ನು ತಡೆಗಟ್ಟುವ ವಿಷಯದಲ್ಲಿ ಪ್ರಗತಿ ಕಾಣಬೇಕೆಂದರೆ ಪಾಕಿಸ್ತಾನವನ್ನು ಭಯೋತ್ಪಾದಕ ದೇಶ ಎಂದು ಘೋಷಿಸಬೇಕು ಎಂದು ಸಂಸತ್ತಿಗೆ ಮನವಿ ಮಾಡಿದರು. ಭಯೋತ್ಪಾದನೆಗೆ ಸರಿಯಾದ ವ್ಯಾಖ್ಯಾನವಿಲ್ಲದ ಕಾರಣ ವಿಶ್ವಸಂಸ್ಥೆ ಹಫೀಜ್ ಸಯೀದ್ ನನ್ನು ಭಯೋತ್ಪಾದಕ ಎಂದು ಘೋಷಿಸಲು ಹೆಣಗಾಡುತ್ತಿದೆ. ಈಗ ರಾಷ್ಟ್ರೀಯ ಹಿತಾಸಕ್ತಿ ಎಂದರೆ ಏನು ಎಂದು ತೋರಿಸುವ ಸಮಯ ನಮಗೆ ಬಂದಿದೆ ಎಂದರು.

ಎಲ್ಲಿಯವರೆಗೂ ಪಾಕಿಸ್ತಾನವನ್ನು ಭಯೋತ್ಪಾದಕ ದೇಶ ಎಂದು ನಾವು ಘೋಷಿಸುವುದಿಲ್ಲವೋ, ಅಲ್ಲಿಯವರೆಗೂ ಪ್ರಪಂಚ ಪಾಕ್ ಅನ್ನು ಭಯೋತ್ಪಾದಕ ದೇಶ ಎಂದು ಘೋಷಿಸುತ್ತದೆ ಎಂದು ನಾವು ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.

ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ನನ್ನು ಗೃಹಬಂಧನದಲ್ಲಿಡುವ ಮೂಲಕ ತಾನು ಉಗ್ರ ವಿರೋಧಿ ದೇಶ ಎಂದು ಬಿಂಬಿಸಿಕೊಳ್ಳಲು ಪಾಕ್ ಪ್ರಯತ್ನಿಸುತ್ತಿದೆ. ಆದರೆ ಪಾಕ್ ನ ಇಂತಹ ನಡೆಗಳು ಹಲವು ಬಾರಿ ಕಣ್ಣೊರೆಸುವ ತಂತ್ರಗಳಾಗಿ ಮಾತ್ರ ಕಂಡಿವೆ ಹೊರತು ಸಯೀದ್ ಹಾಗು ಆತನ ಸಂಘಟನೆ ವಿರುದ್ಧ ಕಠಿಣ ಕ್ರಮ ಕೈಗೊಂಡಿಲ್ಲ ಎಂದರು.

ಸೆಪ್ಟೆಂಬರ್ 2016 ರಲ್ಲಿ ಪಾಕ್ ಉಗ್ರರು ಉರಿ ದಾಳಿ ನಡೆಸಿದ ನಂತರ, ಪಾಕಿಸ್ತಾನವನ್ನು ಭಯೋತ್ಪಾದಕ ದೇಶ ಎಂದು ಘೋಷಿಸುವಂತೆ ಒತ್ತಾಯಿಸಿ ಖಾಸಗಿ ಸದಸ್ಯರ ಮಸೂದೆಯನ್ನು ರಾಜೀವ್ ಚಂದ್ರಶೇಖರ್ ಮೇಲ್ಮನೆಯಲ್ಲಿ ಸಲ್ಲಿಸಿದ್ದರು.

Loading...

Leave a Reply

Your email address will not be published.

error: Content is protected !!