ಟೈಮ್ಸ್ ‘ಪರ್ಸನ್ ಆಫ್ ದ ಇಯರ್ 2016’: ಟ್ರಂಪ್, ಪುಟಿನ್ ಹಿಂದಿಕ್ಕಿದ ಮೋದಿ

ನ್ಯೂಯಾರ್ಕ್: ಪ್ರತಿ ವರ್ಷ ನಡೆಸುವಂತೆ ಈ ವರ್ಷದ ಟೈಮ್ಸ್ ಮ್ಯಾಗಜೀನ್ ‘ಪರ್ಸನ್ ಆಫ್ ದ ಇಯರ್ 2016‘ ಆನ್ಲೈನ್ ಪೋಲ್ ನಲ್ಲಿ ಅಮೆರಿಕದ ಮುಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರವರನ್ನು ಹಿಂದಿಕ್ಕಿ ಭಾರತದ ಪ್ರಧಾನಿ ಮೋದಿ ಮುಂದೆ ಇದ್ದಾರೆ.

ನರೋಂದ್ರ ಮೋದಿ ಈ ಸ್ಪರ್ಧೆಯಲ್ಲಿ ಕಾಣಿಸಿಕೊಂಡಿರುವುದು ಸತತವಾಗಿ ಇದು ನಾಲ್ಕನೇ ಬಾರಿ. ಕಳೆದ ವರ್ಷ ಸುದ್ದಿಗಳಲ್ಲಿ, ವಿಶ್ವದ ಮೇಲೆ ಯಾರು ಹೆಚ್ಚು ಪ್ರಭಾವ ಬೀರಿದ್ದಾರೆ ಎಂಬ ಅಂಶವನ್ನು ಗಣನೆಗೆ ತೆಗೆದುಕೊಂಡು ಈ ಪರ್ಸನ್ ಆಫ್ ದ ಇಯರ್ ಅನ್ನು ಟೈಮ್ಸ್ ಪತ್ರಿಕೆ ತೀರ್ಮಾನಿಸುತ್ತದೆ.

2016 ರ ಪರ್ಸನ್ ಆಫ್ ದ ಇಯರ್ ಯಾರೆಂಬ ಪೋಲಿಂಗ್ ನಲ್ಲಿ ಇಲ್ಲಿವರೆಗೂ ದಾಖಲಾದ ಓಟುಗಳ ಪ್ರಕಾರ ಪ್ರಧಾನಿ ಮೋದಿ ಶೇ. 21 ರಷ್ಟು ಮತ ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜೆ ಸೇ.10 ರಷ್ಟು ಮತ ಗಳಿಸಿದ್ದಾರೆ. ಒಬಾಮಾ ಶೇ.7, ಪುಟಿನ್ ಮತ್ತು ಟ್ರಂಪ್ ತಲಾ ಶೇ.6 ಮತ ಗಳಿಸಿ ನಂತರದ ಸ್ಥಾನಗಳಲ್ಲಿದ್ದಾರೆ. ಡೆಸೆಂಬರ್ 4 ರಂದು ಈ ಪೋಲಿಂಗ್ ಮುಗಿಯುತ್ತದೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ಹಿಲರಿ ಕ್ಲಿಂಟನ್, ಎಫ್.ಬಿ.ಐ ಮುಖ್ಯಸ್ಜೇಮ್ಸ್ ಕೊಮೆ, ಆಪಲ್ ಸಿಇಒ ಟಿಮ್ ಕುಕ್, ಹತ್ಯೆಯಾದ ಮುಸ್ಲಿಂ-ಅಮೆರಿಕನ್ ಯೋಧ ಹುಮಾಯುನ್ ಖಾನ್ ತಂದೆತಾಯಿಗಳಾದ ಗಜಾಲಾ ಖಾನ್, ಖಿಜ್ರ, ಉತ್ತರ ಕೊರಿಯಾ ಅಧ್ಯಕ್ಷ ಕಿಮ್, ಬ್ರಿಟೀಶ್ ಪ್ರಧಾನಿ ಥೆರೆಸಾ ಮೇ, ಚೀನಾ ಅಧ್ಯಕ್ಷ ಜಿನ್ ಪಿಂಗ್ ಇತರ ಪ್ರಮುಖ ಸ್ಪರ್ಧಿಗಳಾಗಿದ್ದಾರೆ.

ನೀವು ಓಟ್ ಮಾಡಿ ಇಲ್ಲಿ ಕ್ಲಿಕ್ ಮಾಡಿ