ಚಾಕ್ಲೆಟ್, ಬಬಲ್ ಗಮ್ ನಿಂದ ಸಣ್ಣ ಕರುಳಿಗೆ ಹಾನಿ – News Mirchi

ಚಾಕ್ಲೆಟ್, ಬಬಲ್ ಗಮ್ ನಿಂದ ಸಣ್ಣ ಕರುಳಿಗೆ ಹಾನಿ

ಚಾಕೋಲೇಟು, ಬಬಲ್ ಗಮ್ ಗಳಲ್ಲಿ ಬಳಸುವ ‘ಟೈಟಾನಿಯಂ ಆಕ್ಸೈಡ್’ ನಿಂದಾಗಿ ಸಣ್ಣ ಕರುಳಿಗೆ ಹಾನಿಯಾಗುತ್ತದೆಯಂತೆ. ಈ ರಾಸಾಯನಿಕದಿಂದ ಕರುಳಿನ ಕಣಗಳು ಶಕ್ತಿಹೀನವಾಗುವ ಸಾಧ್ಯತೆ ಇದ್ದು, ಇದರಿಂದಾಗಿ ರೋಗನಿರೋಧಕ ವ್ಯವಸ್ಥೆ ಬಲಹೀನಗೊಳ್ಳುತ್ತದೆ ಎಂದು ಇತ್ತೀಚಿನ ಸಂಶೋಧನೆಯಲ್ಲಿ ತಿಳಿದು ಬಂದಿದೆ.

ನಮಗೆ ಅರಿವಿಲ್ಲದಂತೆಯೇ ಪ್ರತಿದಿನ ಹಲವು ತಿಂಡಿ, ಆಹಾರ ಪದಾರ್ಥಗಳು, ಸೌಂಧರ್ಯಕ ವರ್ಧಕಗಳ ಮೂಲಕ ಟೈಟಾನಿಯಂ ಆಕ್ಸೈಡ್ ಸೇವಿಸುತ್ತಿದ್ದೇವೆ. ಈ ರಾಸಾಯನಿಕವನ್ನು ಮಿಶ್ರಣ ಮಾಡುವ ಮೂಲಕ ಯಾವುದೇ ಆಹಾರ ಪದಾರ್ಥ ಕಾಂತಿಯುತವಾಗಿ, ಆಕರ್ಷಕವಾಗಿ ಕಾಣುವಂತೆ ಮಾಡಬಹುದು. ಆದ್ದರಿಂದಲೇ ಇದನ್ನು ಬಣ್ಣ, ಕಾಗದ, ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆಯಲ್ಲಿ ಬಳಸುತ್ತಾರೆ.

ಆದರೆ ಹಾಲಿನ ಪದಾರ್ಥಗಳು, ಟೂತ್ ಪೇಸ್ಟ್, ಚಾಕ್ಲೆಟ್ ಗಳಲ್ಲಿಯೂ ಇವುಗಳ ಬಳಕೆ ಹೆಚ್ಚಾಗಿದೆ. ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಕಡಿಮ ಪ್ರಮಾಣದಲ್ಲಿ ಟೈಟಾನಿಯಂ ಆಕ್ಸೈಡ್, ಡಯಾಕ್ಸೈಡ್ ಬಳಸುವುದರಿಂದ ಆರೋಗ್ಯ ಹಾನಿಯಿಲ್ಲ ಎಂದು ಈ ಹಿಂದಿನ ಸಂಶೋಧನೆಗಳು ಹೇಳಿದ್ದವು.

ಆದರೆ ಇದೀಗ ಬಿಂಗ್ ಹಾಮ್ಟನ್ ವಿವಿ ಯ ಗ್ರೇಚನ್ ಮಾಲೆರ್ ತಂಡ ಕೈಗೊಂಡ ಸಂಶೋಧನೆಯಲ್ಲಿ ಆಹಾರದಲ್ಲಿ ‘ಟೈಟಾನಿಯಂ ಆಕ್ಸೈಡ್’ ಎಷ್ಟೇ ಪ್ರಮಾಣವಿದ್ದರೂ ಅದು ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ ಎಂಬುದು ಕಂಡುಕೊಂಡಿದ್ದಾರೆ. ಇದರಿಂದಾಗಿ ಆಹಾರದ ಮೂಲಕ ಲಭಿಸುವ ಪೋಷಕಾಂಶಗಳನ್ನು ಗ್ರಹಿಸುವ ಶಕ್ತಿಯನ್ನು ಜೀರ್ಣವ್ಯವಸ್ಥೆ ಕಳೆದುಕೊಳ್ಳುತ್ತದೆ ಎಂದು ಗ್ರೇನ್ ವಿವರಿಸಿದ್ದಾರೆ.

Loading...

Leave a Reply

Your email address will not be published.