ತಮಿಳು ಪಾಠ ಕಲಿಯುತ್ತಿರುವ ತಮಿಳುನಾಡು ರಾಜ್ಯಪಾಲ

ಚೆನ್ನೈ: ತಮಿಳುನಾಡು ರಾಜ್ಯಪಾಲ್ ಬನ್ವರಿಲಾಲ್ ಪುರೋಹಿತ್ ತಮಿಳು ಕಲಿಯುತ್ತಿದ್ದಾರೆ. ಮಹಾರಾಷ್ಟ್ರದ ನಾಗ್ಪುರದ ಪುರೋಹಿತ್ ಇಂಗ್ಲೀಷ್, ಹಿಂದಿ ಮತ್ತು ಮರಾಠಿಯಲ್ಲಿ ನಿರರ್ಗಳವಾಗಿ ಮಾತನಾಡಬಲ್ಲರು. ಅಕ್ಟೋಬರ್ ನಲ್ಲಿ ತಮಿಳುನಾಡು ರಾಜ್ಯಪಾಲರಾಗಿ ಜವಾಬ್ದಾರಿ ಹೊತ್ತ ಪುರೋಹಿತ್, ರಾಜ್ಯದ ಜನರಿಗೆ ಮತ್ತಷ್ಟು ಹತ್ತಿರವಾಗಲು ಶಿಕ್ಷಕರ ಸಹಾಯದಿಂದ ತಮಿಳು ಪಾಠಗಳು ಕಲಿಯುತ್ತಿದ್ದಾರೆ ಎಂದು ರಾಜ್ಯಪಾಲರ ಕಛೇರಿ ಪ್ರಕಟಿಸಿದೆ.

1977 ರಲ್ಲಿ ಪ್ರತ್ಯಕ್ಷ ರಾಜಕೀಯಕ್ಕೆ ಇಳಿದ ಪುರೋಹಿತ್, ಮೂರು ಬಾರಿ ಲೋಕಸಭೆ ಸಂಸದರಾಗಿ ಆಯ್ಕೆಯಾಗಿದ್ದರು. ಎರಡು ಬಾರಿ ಕಾಂಗ್ರೆಸ್ ನಿಂದ, ಒಂದು ಬಾರಿ ಬಿಜೆಪಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಅಷ್ಟೇ ಅಲ್ಲದೆ ಸ್ವಾತಂತ್ರ್ಯ ಹೋರಾಟಗಾರ ಗೋಪಾಲಕೃಷ್ಣ ಗೋಖಲೆ ನಾಗ್ಪುರದಲ್ಲಿ ಸ್ಥಾಪಿಸಿದ “ದಿ ಹಿತವಾದ’ ಎಂಬ ಪತ್ರಿಕೆಯನ್ನು ಬನ್ವರಿಲಾಲ್ ಪುರೋಹಿತ್ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

Get Latest updates on WhatsApp. Send ‘Add Me’ to 8550851559