ಜೆ.ಎನ್.ಯು ಆವರಣವನ್ನೆಲ್ಲಾ ಶೋಧಿಸಿ: ದೆಹಲಿ ಹೈಕೋರ್ಟ್

ನವದೆಹಲಿ: ಕಳೆದ ಅಕ್ಟೋಬರ್ ನಲ್ಲಿ ನಾಪತ್ತೆಯಾಗಿರುವ ಜೆ.ಎನ್.ಯು ವಿದ್ಯಾರ್ಥಿ ನಜೀಬ್ ಅಹಮದ್ ವಿಷಯದ ಕುರಿತು ಮತ್ತೊಮ್ಮೆ ದೆಹಲಿ ಹೈಕೋರ್ಟ್ ಸ್ಪಂದಿಸಿದೆ. ಆತ ನಾಪತ್ತೆಯಾಗಿ ಎರಡು ತಿಂಗಳು ಕಳೆದಿವೆ. ವಿವಿ ಆವರಣವನ್ನೆಲ್ಲಾ ಸ್ನಿಫರ್ ಡಾಗ್ಸ್ ಮೂಲಕ ಶೋಧ ನಡೆಸಬೇಕೆಂದು ಜಸ್ಟೀಸ್ ಜಿ.ಎಸ್.ಸಿಸ್ಟಾನೀ, ಜಸ್ಟೀಸ್ ವಿನೋದ್ ಗೋಯಲ್ ರವರ ನ್ಯಾಯಪೀಠ ಪೊಲೀಸರಿಗೆ ಆದೇಶಿಸಿದೆ. ವಿಶ್ವವಿದ್ಯಾಲಯದಲ್ಲಿ ಕಣಕಣವೂ ಶೋಧಿಸಿ ಯಾವುದಾದರೂ ಒಂದು ಸಾಕ್ಷಿಯನ್ನು ಗಳಿಸುವಂತೆ ಹೈಕೋರ್ಟ್ ಪೊಲೀಸರಿಗೆ ಸೂಚಿಸಿದೆ.

ಅದೇ ರೀತಿ ಜೆ.ಎನ್.ಯು ಸೇರಿದಂತೆ ಜೆ.ಎನ್.ಯು ನಲ್ಲಿನ ವಿದ್ಯಾರ್ಥಿ ಸಂಘಟನೆಗಳಲ್ಲೂ ಶೋಧ ನಡೆಸಲು ಯಾವುದೇ ಆಕ್ಷೇಪಗಳಿಲ್ಲ ಎಂದು ಅಫಿಡವಿಟ್ ದಾಖಲಿಸಲು ನ್ಯಾಯಪೀಠ ಹೇಳಿದೆ.

ನಜೀಬ್ ಅಹ್ಮದ್ ಕಿಡ್ನಾಪ್ ಆಗಿದ್ದಾರೆಂದು ಮಾತುಗಳ ಆರಂಭದಲ್ಲಿ ಕೇಳಿಬಂದವು, ಆದರೆ ಇದಕ್ಕೆ ಯಾವುದೇ ಸಾಕ್ಷಿ ಲಭ್ಯವಾಗಿಲ್ಲ. ಇಷ್ಟವಿಲ್ಲದ ಕಾರಣ ಆತನೇ ಜೆ.ಎನ್.ಯು ನಿಂದ ಪರಾರಿಯಾಗಿದ್ದಾನೆಂಬ ಮಾತುಗಳು ಈಗ ಕೇಳಿಬರುತ್ತಿವೆ. ಮತ್ತೊಂದು ಕಡೆ ನಜೀಬ್ ಕುರಿತು ಮಾಹಿತಿ ನೀಡಿದವರಿಗೆ ದೆಹಲಿ ಪೊಲೀಸರು ಪ್ರಕಟಿಸಿದ್ದ ರೂ. 50 ಸಾವಿರ ಬಹುಮಾನವನ್ನು ರೂ. 5 ಲಕ್ಷಗಳಿಗೆ ಏರಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

Related News

Loading...

Leave a Reply

Your email address will not be published.

error: Content is protected !!