ದೊಡ್ಡ ನೋಟೂ ಬೇಡಾ, ದುಡ್ಡೂ ಬೇಡಾ: ವಾಹನ ಸವಾರರಿಗೆ ಟೋಲ್ ಶುಲ್ಕ ಇಲ್ಲದೆ ಬಿಟ್ಟರು

ಗುರುಗ್ರಾಮ್: ದೊಡ್ಡ ನೋಟುಗಳನ್ನು ರದ್ದುಪಡಿಸಿ ಸರ್ಕಾರ ಕೈಗೊಂಡ ನಿರ್ಧಾರದಿಂದ ಜನರಿಗೆ ಇಂದು ಚಿಲ್ಲರೆ ಸಮಸ್ಯೆ ಉದ್ಭವಿಸಿದೆ. ಇಲ್ಲಿಯವರೆಗೂ ತುಂಬಾ ಇಷ್ಟಪಡುತ್ತಿದ್ದ ರೂ. 500 ಮತ್ತು 1000 ರ ಮುಖ ಬೆಲೆಯ ನೋಟುಗಳು ಇದ್ದೂ ಸದ್ಯಕ್ಕೆ ಉಪಯೋಗಕ್ಕೆ ಬಾರದಂತಾಗಿವೆ.

ಜೇಬಿನಲ್ಲಿರುವ 10 ರುಪಾಯಿಗೇ ಈಗ ಬೆಲೆ ಹೆಚ್ಚಾಗಿದೆ. ಪೆಟ್ರೋಲ್ ಬಂಕ್, ಟೋಲ್ಗೇಟ್ ಬಳಿ ಬೇಡವೆಂದರೂ ವಾಹನ ಸವಾರರು ದೊಡ್ಡ ನೋಟುಗಳೇ ಜೇಬಿನಿಂದ ತೆಗೆಯುತ್ತಿರುವುದರಿಂದ ಟೋಲ್ ಸಿಬ್ಬಂದಿ ಕಷ್ಟ ಅನುಭವಿಸುತ್ತಿದ್ದಾರೆ.

ಗುರುಗ್ರಾಮ್ ನ ಟೋಲ್ ಪ್ಲಾಜಾ ಒಂದರ ಬಳಿ ಇದೇ ಪರಿಸ್ಥಿತಿ ಎದುರಾಗಿದೆ. ವಾಹನಸವಾರರೆಲ್ಲಾ ದೊಡ್ಡ ನೋಟ್ ನೀಡಲು ಮುಂದಾಗಿರುವುದರಿಂದ ಅಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ, ಕೊನೆಗೆ ಟೋಲ್ ಸಿಬ್ಬಂದಿ ‘ನೀವು ದುಡ್ಡೇ ಕೊಡಬೇಡಿ, ಹೋಗಿ’ ಅಲ್ಲಿಂದ ವಾಹನ ಸವಾರರನ್ನು ಹಾಗೇ ಬಿಟ್ಟು ಟ್ರಾಫಿಕ್ ಕ್ಲಿಯರ್ ಮಾಡಿದ ಘಟನೆ ನಡೆದಿದೆ.