ಇಂದು ಪಿಎಸ್ಎಲ್ವಿ ಸಿ38 ಉಡಾವಣೆಗೆ ಕೌಂಟ್ ಡೌನ್ |News Mirchi

ಇಂದು ಪಿಎಸ್ಎಲ್ವಿ ಸಿ38 ಉಡಾವಣೆಗೆ ಕೌಂಟ್ ಡೌನ್

ಶುಕ್ರವಾರ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಡೆಯಲಿರುವ ಪಿಎಸ್ಎಲ್ವಿ ಸಿ38 ರಾಕೆಟ್ ಉಡಾವಣೆಗೆ ಸಂಬಂಧಿಸಿದ ಕೌಂಟ್ ಡೌನ್ ಗುರುವಾರ ಮುಂಜಾನೆ 5:29 ಕ್ಕೆ ಆರಂಭವಾಗಿದೆ. ಬುಧವಾರ ಇದಕ್ಕೆ ಸಂಬಂಧಿಸಿದ ಮಿಷನ್ ಸಿದ್ಧತಾ ಸಭೆಯನ್ನು ನಡೆಸಲಾಯಿತು. ಉಡಾವಣಾ ಪೂರ್ವಾಭ್ಯಾಸವನ್ನು ನಡೆಸಿ ಕೌಂಟ್ ಡೌನ್, ಪರೀಕ್ಷೆ ಸಮಯಗಳನ್ನು ಅಧಿಕೃತವಾಗಿ ಪ್ರಕಟಿಸಿದರು.

28 ಗಂಟೆಗಳ ಕೌಂಟ್ ಡೌನ್ ನಂತರ ಶುಕ್ರವಾರ ಬೆಳಗ್ಗೆ 9:29ಕ್ಕೆ ರಾಕೆಟ್ ಅನ್ನು ಉಡಾಯಿಸುತ್ತಾರೆ. ಇದರ ಮೂಲಕ 714 ಕೆಜಿ ತೂಕವಿರುವ ಕಾರ್ಟೋಸ್ಯಾಟ್ 2ಡಿ, ದೇಸೀಯ ರಾಷ್ಟ್ರೀಯ ವಿಶ್ವವಿದ್ಯಾಲಯದ ಒಂದು ಸಣ್ಣ ಉಪಗ್ರಹ ಜತೆಗೆ 14 ದೇಶಗಳ 29 ಉಪಗ್ರಹಗಳನ್ನು ಗಗನಕ್ಕೆ ಹಾರಲಿವೆ.

Loading...
loading...
error: Content is protected !!