ಎನ್ಕೌಂಟರಿನಲ್ಲಿ ಪ್ರಮುಖ ಲಷ್ಕರ್ ಉಗ್ರನ ಹತ್ಯೆ |News Mirchi

ಎನ್ಕೌಂಟರಿನಲ್ಲಿ ಪ್ರಮುಖ ಲಷ್ಕರ್ ಉಗ್ರನ ಹತ್ಯೆ

ಲಷ್ಕರ್ -ಇ-ತೊಯ್ಬಾ ಟಾಪ್ ಕಮಾಂಡರ್ ಅಬು ದುಜನಾ ಮಂಗಳವಾರ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರಿನಲ್ಲಿ ಹತನಾಗಿದ್ದಾನೆಂದು ಎಂದು ವರದಿಯಾಗಿದೆ. ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ ನಲ್ಲಿ ಅಬು ದುಜನಾ(27) ಜೊತೆ ಮತ್ತೊಬ್ಬ ಉಗ್ರ ಸತ್ತಿದ್ದಾನೆಂದು ಸ್ಥಳೀಯ ಸುದ್ದಿ ವಾಹಿನಿಗಳು ವರದಿ ಮಾಡಿವೆ.

ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಭದ್ರತಾ ಪಡೆಗಳು ಪುಲ್ವಾಮಾದ ಹಕ್ರಿಪೋರಾ ಗ್ರಾಮದಲ್ಲಿ ಶೋಧ ಕಾರ್ಯಚರಣೆ ನಡೆಸಿದ್ದರು. ಈ ವೇಳೆ ಉಗ್ರರು ಭದ್ರತಾ ಪಡೆಗಳತ್ತ ಗುಂಡು ಹಾರಿಸಿದ್ದಾರೆ. ಭದ್ರತಾಪಡೆಗಳು ನಡೆಸಿದ ಪ್ರತಿದಾಳಿಯಲ್ಲಿ ಅಬು ದುಜನಾ ಸತ್ತಿದ್ದು, ಮತ್ತೊಬ್ಬ ಉಗ್ರ ಆರಿಫ್ ಲಿಲ್ಹಾರಿ ಕೂಡಾ ಹತನಾಗಿದ್ದಾನೆ ಎನ್ನಲಾಗಿದೆ.

  • No items.

ಮುಂದಿನ ಚುನಾವಣೆಯಲ್ಲಿ ಮೋದಿಗೆ ಸವಾಲೆಸೆಯಬಲ್ಲವರು ಯಾರೂ ಇಲ್ಲ: ನಿತೀಶ್ ಕುಮಾರ್

ಇನ್ನೂ ಒಂದಿಬ್ಬರು ಉಗ್ರರು ಅಡಗಿರುವ ಶಂಕೆಯಿದ್ದು, ಕಾರ್ಯಚರಣೆ ಮುಂದುವರೆದಿದೆ. ಸತ್ತ ಉಗ್ರರ ಮೃತದೇಹಗಳನ್ನು ಇನ್ನೂ ಸ್ವಾಧೀನಪಡಿಸಿಕೊಂಡಿಲ್ಲ, ಹೀಗಾಗಿ ಯಾರು ಸತ್ತಿದ್ದಾರೆಂಬುದನ್ನು ಇನ್ನೂ ಖಚಿತವಾಗಿ ಹೇಳಲು ಸಾಧ್ಯವಿಲ್ಲವೆಂದು ಕಾಶ್ಮೀರ ಐಜಿ ಮುನೀರ್ ಖಾನ್ ಹೇಳಿದ್ದಾರೆ.

ಬ್ರಿಟನ್ ನಲ್ಲಿ ಹೆಚ್ಚುತ್ತಿರುವ ಪುರುಷರ ಮೇಲಿನ ರೇಪ್’ಗಳು!

Loading...
loading...
error: Content is protected !!