_20161106_135005

ಜಿಯೋ ನೆಟ್ವರ್ಕ್ ಕಾರ್ಯವೈಖರಿಯ ಬಗ್ಗೆ ಟ್ರಾಯ್ ಪರಿಶೀಲನೆ

ರಿಲಯನ್ಸ್ ಜಿಯೋ ಇನ್ಫೋಕಾಂ ನೆಟ್ವರ್ಕ್ ಕಾರ್ಯವೈಖರಿಯ ಬಗ್ಗೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ(ಟ್ರಾಯ್) ಗಮನ ಹರಿಸಿದೆ. ಮುಖೇಶ್ ಅಂಬಾನಿಗೆ ಸೇರಿದ ಜಿಯೋ ನೆಟ್ವರ್ಕ್ ನಲ್ಲಿ ವಿಪರೀತ ಕಾಲ್ ಫೈಲ್ಯೂರ್ ಆಗುತ್ತಿವೆ ಎಂದು ಗ್ರಾಹಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ನೆಟ್ವರ್ಕ್ ಕಾರ್ಯವೈಖರಿಯ ಬಗ್ಗೆ ಟ್ರಾಯ್ ಪರಿಶೀಲಿಸುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೇಶದಲ್ಲಿನ ಟೆಲಿಕಾಂ ನೆಟ್ವರ್ಕ್ ಗಳ ಮೂಲಕ ಗ್ರಾಹಕರಿಗೆ ಉತ್ತಮವಾದ ಸೇವೆ ಲಭ್ಯವಾಗುವಂತೆ ನೋಡುವುದೇ ತಮ್ಮ ಕೆಲಸ ಎಂದು ಅವರು ಹೇಳಿದರು. ಜಿಯೋ ನೆಟ್ವರ್ಕ್ ನಲ್ಲಿ ತಲೆದೋರಿರುವ ಕಾಲ್ ಫೇಲ್ಯೂರ್ ಸಮಸ್ಯೆ ಜೊತೆಗೆ ಇತರ ಸಮಸ್ಯೆಗಳನ್ನೂ ಬಗೆಹರಿಸಬೇಕಾದ ಅವಶ್ಯಕತೆ ಇದೆ ಎಂದು ಅವರು ಹೇಳಿದರು. ಇಮೇಲ್ ಮೂಲಕ ಕೇಳಿದ ಪ್ರಶ್ನೆಗಳಿಗೆ ಜಿಯೋ ಉತ್ತರಿಸುತ್ತಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.

Related Post

error: Content is protected !!