ದರ ಸಮರ: ಮೊಬೈಲ್ ಆಪರೇಟರ್ ಗಳಿಗೆ ಹೊಸ ನಿಯಮಗಳು ಶೀಘ್ರ

ಕ್ಷೇತ್ರಕ್ಕೆ ಕಾಲಿಡುತ್ತಿದ್ದಂತೆ ಅಗ್ಗದ ದರಗಳಲ್ಲಿ ಸೇವೆ ನೀಡುವ ಮೂಲಕ ಪ್ರತಿಸ್ಪರ್ಧಿ ಕಂಪನಿಗಳಲ್ಲಿ ನಡುಕ ಹುಟ್ಟಿಸಿದ್ದ ವಿರುದ್ಧ ಭಾರ್ತಿ , ಮತ್ತು ಸಂಸ್ಥೆಗಳು ಆಕ್ರೋಶ ವ್ಯಕ್ತಪಡಿಸುತ್ತಾ ಬರುತ್ತಿರುವುದು ತಿಳಿದದ್ದೇ. ಇದೀಗ ಭಾರತದ ನಿಯಂತ್ರಕ ಪ್ರಾಧಿಕಾರವು ಕಂಪನಿಗಳು ನಿಗದಿಪಡಿಸುವ ದರಗಳಿಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ತರಲು ಮುಂದಾಗಿದೆ.

ದಶಕದಿಂದೀಚೆಗೆ ಟೆಲಿಕಾಂ ಸೇವೆಗಳಲ್ಲಿ (ವಾಯ್ಸ್ ನಿಂದ ಡಾಟಾಗೆ) ಆಗಿರುವ ಬದಲಾವಣೆಗಳು, ದರ ನಿಗದಿಗೆ ಸಂಬಂಧಿಸಿದಂತೆ ಟೆಲಿಕಮ್ಯೂನಿಕೇಷನ್ ಟಾರಿಫ್ ಆರ್ಡರ್ 1999 ಅನ್ನು ಪರಿಶೀಲಿಸಿ ಹೊಸ ನಿಯಮಗಳನ್ನು ರೂಪಿಸುವ ಅನಿವಾರ್ಯತೆ ಸೃಷ್ಟಿಸಿದೆ.

ಗ್ರಾಹಕರಿಗೆ ಸ್ಪರ್ಧಾತ್ಮಕ ದರಗಳಿಗೆ ವಿರುದ್ಧವಾಗಿ ಕೊಡುಗೆಗಳನ್ನು ನೀಡಿ ಆಕರ್ಷಿಸುತ್ತಿರುವ ನ ಮುಖೇಶ್ ಅಂಬಾನಿ ಯವರಿಗೆ ದಂಡ ವಿಧಿಸುವಂತೆ ಸಂಸ್ಥೆಯು ಸ್ಪರ್ಧಾ ಆಯೋಗವನ್ನು ಈ ಹಿಂದೆ ಒತ್ತಾಯಿಸಿತ್ತು. ಕೂಡಾ ವಿರುದ್ಧ ತಪ್ಪು ಮಾಹಿತಿಗಳಿಂದ ಕೂಡಿದ ಪ್ರಚಾರ ಮತ್ತು ದರ ನಿಯಂತ್ರಣ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿತ್ತು.

ಜಿಯೊ ಅತಿ ಕಡಿಮೆ ದರದಲ್ಲಿ ಸೇವೆ ನೀಡಲು ಹಲವು ಕೊಡುಗೆಗಳನ್ನು ನೀಡಲು ಆರಂಭಿಸಿದ ಮೇಲೆ, ಇತರೆ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ಹಲವು ಸರ್ಕಸ್ ಗಳನ್ನು ಮಾಡುತ್ತಿದ್ದಾರೆ. ಅನಿವಾರ್ಯವಾಗಿ ಜಿಯೋದೊಂದಿಗೆ ಸ್ಪರ್ಧೆಗೆ ಬಿದ್ದು ದರಗಳಲ್ಲಿ ಕಡಿತ ಮಾಡಿ ಹೊಸ ಹೊಸ ಕೊಡುಗೆಗಳನ್ನು ನೀಡಿ ಗ್ರಾಹಕರನ್ನು ಆಕರ್ಷಿಸಲು ಪ್ರಯತ್ನಿಸುತ್ತಿವೆ.

Related News

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache