ಲಿಂಗ ಬದಲಿಸಿಕೊಂಡವರಿಗೆ ರೈಲ್ವೇಯಲ್ಲಿ ಮೂರನೇ ಕಾಲಮ್

ನವದೆಹಲಿ: ಲಿಂಗ ಬದಲಾವಣೆ ಮಾಡಿಸಿಕೊಂಡ ವ್ಯಕ್ತಿಗಳನ್ನು ಭಾರತೀಯ ರೈಲ್ವೇ ಥರ್ಡ್ ಜೆಂಡರ್ ಆಗಿ ಪರಿಗಣಿಸಿ ಅವರಿಗಾಗಿ ರೈಲ್ವೇ ರಿಸರ್ವೇಷನ್, ಕ್ಯಾನ್ಸಲೇಷನ್ ಅರ್ಜಿಗಳಲ್ಲಿ ಸ್ತ್ರೀ, ಪುರುಷರೊಂದಿಗೆ ಮೂರನೇ ವರ್ಗ ಸೇರಿಸಿದೆ. ಟಿಕೆಟ್ ಕೌಂಟರ್ ಗಳೊಂದಿಗೆ ಆನ್ಲೈನ್ ಸೇವೆಗಳಲ್ಲೂ ಇದು ಜಾರಿಗೆ ಬರಲಿದೆ.

ಮಂಗಳಮುಖಿಯರು, ಲಿಂಗಬದಲಾವಣೆ ಮಾಡಿಸಿಕೊಂಡ ವ್ಯಕ್ತಿಗಳ ಹಕ್ಕುಗಳ ರಕ್ಷಣೆಗಾಗಿ ಅವರನ್ನು ತೃತೀಯ ಲಿಂಗಿ ಎಂದು ಗುರುತಿಸಬೇಕೆಂದು 2014 ರಲ್ಲಿ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಹೀಗಾಗಿ ಅವರಿಗಾಗಿ ಒಂದು ಕಾಲಮ್ ಮೀಸಲಿರಿಸುತ್ತಿರುವುದಾಗಿ ರೈಲ್ವೇ ಇಲಾಖೆ ಹೇಳಿದೆ.