ಸೈನಿಕರಿಗೆ ಎಸಿ ಜಾಕೆಟ್ಗಳನ್ನು ಒದಗಿಸಲು ಕೇಂದ್ರದ ಚಿಂತನೆ

ತಾಪಮಾನ ಹೆಚ್ಚಾಗಿರುವ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ವಿಶೇಷ ಪಡೆಗಳ ಸೈನಿಕರಿಗೆ ಹವಾನಿಯಂತ್ರಿತ (ಎಸಿ) ಜಾಕೆಟ್ಗಳನ್ನು ಸರಬರಾಜು ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಆದರೆ ಈ ಜಾಕೆಟ್ಗಳ ತಯಾರಿಕೆಯಲ್ಲಿ ಯಾವ ತಂತ್ರಜ್ಞಾನ ಮತ್ತು ವಸ್ತುಗಳನ್ನು ಬಳಸುತ್ತಾರೆ ಎಂಬ ಕುರಿತು ವಿವರಗಳು ಬಹಿರಂಗವಾಗಿಲ್ಲ.

ಸೈನಿಕರಿಗೆ ಈ ಜಾಕೆಟ್ಗಳನ್ನು ನೀಡುವ ನಿಟ್ಟಿನಲ್ಲಿ ಪ್ರಯೋಗಗಳು ನಡೆಯುತ್ತಿವೆ ಎಂದು ಗೋವಾ ಮುಖ್ಯಮಂತ್ರಿ ಹಾಗೂ ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ. ಭಾನುವಾರ ಪಣಜಿಯಲ್ಲಿ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಐಐಟಿ, ಐಐಎಸ್ಸಿ ಪಿಹೆಚ್ಡಿ ವಿದ್ಯಾರ್ಥಿಗಳಿಗೆ ಇನ್ನು ಮಾಸಿಕ ರೂ. 70 ಸಾವಿರ ಶಿಷ್ಯವೇತನ

ವಿಶೇಷ ಪಡೆಗಳ ಕಾರ್ಯಚರಣೆ ದೀರ್ಘಾವಧಿ ಪ್ರಕ್ರಿಯೆಯಾಗಿರುವುದರಿಂದ ಸೈನಿಕರ ದೇಹದ ಉಷ್ಣತೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ, ಅಂತ ಸಂದರ್ಭಗಳಲ್ಲಿ ಸೈನಿಕರಿಗೆ ಅಸಹನೀಯವೆನಿಸುತ್ತದೆ. ಸೈನಿಕರು ಎಸಿ ಜಾಕೆಟ್ ಧರಿಸಿದ್ದರೆ, ಅವರಿಗೆ ತುಂಬಾ ಅನುಕೂಲವಾಗುತ್ತದೆ ಎಂದು ಪರಿಕ್ಕರ್ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಳುತ್ತದೆ ಎಂದು ಅವರು ಹೇಳಿದ್ದಾರೆ.

ಅಮೆರಿಕದ ಸೈನಿಕರು ಈಗಾಗಲೇ ಇಂತಹ ಜಾಕೆಟ್ಗಳನ್ನು ಬಳಸುತ್ತಿದ್ದಾರೆ. ಸೈನಿಕರ ಉಡುಪುಗಳಲ್ಲಿ ಸಣ್ಣ ಸಣ್ಣ ಬ್ಯಾಟರಿಗಳನ್ನು ಅಳವಡಿಸುವ ಮೂಲಕ ಸೈನಿಕರ ದೇಹದ ತಾಪಮಾನ ಹೆಚ್ಚಾಗದಂತೆ ಜಾಕೆಟ್ಗಳನ್ನು ವಿನ್ಯಾಸಗೊಳಿಸಿ ಅಮೆರಿಕದ ಸೈನಿಕರಿಗೆ ಒದಗಿಸಲಾಗಿದೆ.

ಮೋದಿ ಎಂದರೆ ಇಷ್ಟಾನೇ, ಆದರೆ ಅಮಿತ್ ಶಾ ಅಂದ್ರೆ ಕಷ್ಟ

ಇದೇ ವೇಳೆ ಭಾರತದ ಲಘು ಯುದ್ಧ ವಿಮಾನ “ತೇಜಸ್” ಕುರಿತೂ ಮಾತನಾಡಿದ ಅವರು, ತೇಜಸ್ ಒಂದು ಲಘು ಯುದ್ಧ ವಿಮಾನ ಎಂಬುದು ಒಂದೇ ಒಂದು ದುರ್ಬಲ ಅಂಶವಾಗಿದೆ. ಲಘು ಯುದ್ಧವಿಮಾನವಾದ್ದರಿಂದ ಅದು ಕೇವಲ 3.5 ಟನ್ ಭಾರವನ್ನು ಮಾತ್ರ ಸಾಗಿಸಬಲ್ಲದು. ಅದನ್ನು ಹೊರತು ಪಡಿಸಿದರೆ, ವಿಶ್ವದ ಹಲವು ಯುದ್ಧ ವಿಮಾನಗಳಿಗಿಂತ ತೇಜಸ್ ಹಲವು ಪಟ್ಟು ಉತ್ತಮ ಯುದ್ಧವಿಮಾನವಾಗಿದ್ದು, ಒಳ್ಳೆಯ ಸಾಮರ್ಥ್ಯಗಳನ್ನು ಹೊಂದಿದೆ ಎಂದು ಅವರು ಹೇಳಿದರು.