ಮತ್ತೆ ಶುರುವಾದ ಒಂದು ರೂಪಾಯಿ ನೋಟು ಮುದ್ರಣ

ಮುಂಬೈ: ನೋಟುಗಳ ಕೊರತೆ ಹಿನ್ನೆಲೆಯಲ್ಲಿ ಈಗ ಒಂದು ರೂಪಾಯಿ ನೋಟಿಗೂ ಬೇಡಿಕೆ ಶುರುವಾಗಿದೆ. ಮಹಾರಾಷ್ಟ್ರದ ನಾಸಿಕ್ ಕರೆನ್ಸಿ ಪ್ರಿಂಟಿಂಗ್ ಪ್ರೆಸ್ ನಲ್ಲಿ ನೋಟು ಮುದ್ರಣ ವೇಗ ಪಡೆದುಕೊಂಡಿದೆ. 30 ವರ್ಷದ ಹಿಂದೆಯೇ ಈ ನೋಟುಗಳ ಮುದ್ರಣ ನಿಲ್ಲಿಸಲಾಗಿತ್ತು. ಈಗ ಮತ್ತೆ ಒಂದು ರೂ. ನೋಟು ಮುದ್ರಣ ಶುರುವಾಗಿದೆ. ಈಗಾಗಲೇ ರೂ. 10 ಲಕ್ಷ ಮೌಲ್ಯದ ಒಂದು ರೂಪಾಯಿ ನೋಟುಗಳು ಇಲ್ಲಿಂದ ರವಾನೆಯಾಗಿವೆ.

ಗುರುವಾರ ಒಂದೇ ದಿನದಲ್ಲಿ ರೂ. 1.90 ಕೋಟಿ ಮೌಲ್ಯದ ನೋಟು ಮುದ್ರಿಸಿ ದಾಖಲೆ ಸೃಷ್ಟಿಸಿದ್ದಾರೆ. ಇದಲ್ಲದೇ ಮತ್ತೆ ರೂ. 1.25 ಕೋಟಿ ಮೌಲ್ಯದ ರೂ. 100, ರೂ. 1.50 ಕೋಟಿ ಮೌಲ್ಯದ ರೂ. 10, 20, 50 ರ ನೋಟುಗಳನ್ನು ಮುದ್ರಿಸಲಿದ್ದಾರೆ.