ಆರ್‌ಎಸ್‌ಎಸ್ ಪ್ರಸ್ತಾವನೆಗೆ ಮುಸ್ಲಿಮರ ಬೆಂಬಲ – News Mirchi

ಆರ್‌ಎಸ್‌ಎಸ್ ಪ್ರಸ್ತಾವನೆಗೆ ಮುಸ್ಲಿಮರ ಬೆಂಬಲ

ಉತ್ತರ ಪ್ರದೇಶದ ಮುಸ್ಲಿಂ ಕ್ಷೇತ್ರಗಳಲ್ಲಿ ಬಿಜೆಪಿ ಹೇಗೆ ಗೆಲುವು ಸಾಧಿಸಿತು ಎಂದು ಹಲವರು ತಲೆ ಕೆರೆದುಕೊಳ್ಳುತ್ತಿದ್ದಾರೆ. ಇದರ ನಡುವೆಯೇ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಬಿಜೆಪಿಯನ್ನು ತೆರೆಯ ಹಿಂದೆ ನಿಂತು ಮುನ್ನಡೆಸುವ ಆರ್.ಎಸ್.ಎಸ್ ಪ್ರಸ್ತಾವನೆಗೆ ಭಾರೀ ಪ್ರಮಾಣದಲ್ಲಿ ಮುಸ್ಲಿಮರು ಬೆಂಬಲಿಸಿದ್ದಾರೆ. ಟ್ರಿಪಲ್ ತಲಾಖ್ ಗೆ ವಿರುದ್ಧವಾಗಿ ಆರ್.ಎಸ್.ಎಸ್ ಮುಸ್ಲಿಂ ವಿಭಾಗವಾದ ಮುಸ್ಲಿಂ ರಾಷ್ಟ್ರೀಯ ಮಂಚ್(ಎಂ.ಆರ್.ಎಂ) ಕೈಗೊಂಡ ಸಹಿ ಚಳುವಳಿ ಕಾರ್ಯಕ್ರಮಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಎಂ.ಆರ್.ಎಂ ಪಿಟೀಷನ್ ಗೆ 10 ಲಕ್ಷಕ್ಕೂ ಹೆಚ್ಚು ಮುಸ್ಲಿಮರು ಸಹಿ ಮಾಡಿ ಬೆಂಬಲಿಸಿದ್ದಾರೆ. ಇವರಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮಹಿಳೆಯರು ಇರುವುದು ಗಮನಾರ್ಹ.

ಟ್ರಿಪಲ್ ತಲಾಖ್ ವಿಷಯದ ಕುರಿತು ದೇಶಾದ್ಯಂತ ಚರ್ಚೆ ನಡೆಯಬೇಕೆಂದು ಎಂಆರ್‌ಎಂ ಕರೆ ನೀಡಿದೆ. ಇದು ಒಂದು ಸಮುದಾಯದಲ್ಲಿ ಎದುರಾದ ಸಮಸ್ಯೆ. ಇದರ ಕುರಿತು ಸಮಗ್ರ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು. ಮುಸ್ಲಿಂ ಮಹಿಳೆಯರಿಗೆ ಅನ್ಯಾಯ ನಡೆಯದಂತೆ ತಡೆಯಬೇಕು ಎಂದು ಎಂಆರ್‌ಎಂ ಹೇಳಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಟ್ರಿಪಲ್ ತಲಾಖ್ ಅಂಶವೂ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ.

Loading...

Leave a Reply

Your email address will not be published.