ಟ್ರಿಪಲ್ ತಲಾಖ್ ಕುರಿತು ಮಹತ್ವದ ತೀರ್ಪು – News Mirchi

ಟ್ರಿಪಲ್ ತಲಾಖ್ ಕುರಿತು ಮಹತ್ವದ ತೀರ್ಪು

ಟ್ರಿಪಲ್ ತಲಾಖ್ ಕುರಿತು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಟ್ರಿಪಲ್ ತಲಾಖ್ ಸಂವಿಧಾನದ ವಿರುದ್ಧವಾಗಿದ್ದು, ಸಂವಿಧಾನದ ಪ್ರಕಾರ ಸ್ವೀಕಾರಾರ್ಹವಲ್ಲ, ಇದನ್ನು ಯಾರೂ ಪಾಲಿಸಬೇಕಿಲ್ಲ ಎಂದು ಹೇಳಿದೆ.

ಸಂವಿಧಾನದ ಹಕ್ಕುಗಳನ್ನು ಹತ್ತಿಕ್ಕುವಂತ ವೈಯುಕ್ತಿಕ ಕಾನೂನು ಮಂಡಳಿ ಯಾವುದೂ ಇರಬಾರದು ಎಂದು ಹೈಕೋರ್ಟ್ ಹೇಳಿತು. ಟ್ರಿಪಕ್ ತಲಾಖ್ ಎನ್ನುವುದು ಮಹಿಳೆಯರ ಹಕ್ಕುಗಳನ್ನು ಉಲ್ಲಂಘಿಸುವಂತದ್ದು, ಇದಕ್ಕೆ ಕಾನೂನು ಮಾನ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿತು. ಸಂವಿಧಾನಕ್ಕೆ ಯಾರೂ ದೊಡ್ಡವರಲ್ಲ, ಎಲ್ಲರೂ ಸಂವಿಧಾನವನ್ನು ಪಾಲಿಸಲೇಬೇಕು ಎಂದು ಹೇಳಿತು.

ತುಂಬಾ ದಿನಗಳಿಂದ ಮುಸ್ಲಿಮ್ ಸಮುದಾಯದಲ್ಲಿ ಆಚರಣೆಯಲ್ಲಿರುವ ಟ್ರಿಪಲ್ ತಲಾಖ್ ಕುರಿತು ವಿವಾದಗಳು ಮುಂದುವರೆಯುತ್ತಿವೆ. ಮೂರು ಬಾರಿ ತಲಾಖ್ ಎಂದು ಹೇಳುವುದರ ಮೂಲಕ ಪತ್ನಿಗೆ ವಿಚ್ಛೇದನ ನೀಡುವ ಮುಸ್ಲಿಂ ಸಮುದಾಯದ ಆಚರಣೆ ಕುರಿತು ಹಲವು ರೀತಿಯ ಟೀಕೆ, ವಿವಾದಗಳಿವೆ.

ಕೇವಲ ಬಾಯಿ ಮಾತಿನಿಂದ ವಿಚ್ಛೇದನ ನೀಡಿದರೆ ಮಹಿಳೆಯರಿಗೆ ಅನ್ಯಾಯವಾಗುತ್ತದೆ ಎಂದು ಹಲವರ ವಾದವಾಗಿದೆ. ಆದರೆ ಇದು ತಮ್ಮ ಧಾರ್ಮಿಕ ಆಚರಣೆಗೆ ಸಂಬಂಧಿಸಿದ ವಿಷಯ. ಇದರಲ್ಲಿ ಮೂಗು ತೂರಿಸುವುದು ಸರಿಯಲ್ಲ ಎಂದು ಮುಸ್ಲಿಂ ಧಾರ್ಮಿಕ ಮುಖಂಡರ ವಾದ. ಹಾಗಾಗಿ ಈ ತೀರ್ಪು ಮಹತ್ವ ಪಡೆದಿದೆ.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!