ತಲಾಖ್ ರದ್ದು ಮಾಡಿ ನನಗೆ ನ್ಯಾಯ ಕೊಡಿಸಿ: ಮೋದಿಗೆ ಮುಸ್ಲಿಂ ಮಹಿಳೆ ಪತ್ರ

ಲಕ್ನೋ: ಈಗಾಗಲೇ ಇಬ್ಬರು ಹೆಣ್ಣು ಮಕ್ಕಳ ತಾಯಿಯಾಗಿರುವ ಪತ್ನಿ ಮತ್ತೆ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆಂಬ ಅನುಮಾನದಿಂದ ಆಕೆಯನ್ನು ಮನೆಯಿಂದ ಪತಿ ಹೊರಗೆ ಹಾಕಿದ ಘಟನೆ ಉತ್ತರ ಪ್ರದೇಶದ ಬುದಾಕೇಡಾ ಗ್ರಾಮದಲ್ಲಿ ನಡೆದಿದೆ. ದನಕ್ಕೆ ಬಡಿದಂತೆ ಬಡಿದು, ತಲಾಖ್ ನೀಡಿದ್ದಾನೆ. ನನಗೆ ನ್ಯಾಯ ಕೊಡಿಸಿ ಎಂದು ಪೊಲೀಸರ ಮೊರೆ ಹೋದರೂ ಪ್ರಯೋಜನವಾಗದ ಕಾರಣ, ಆಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮೊರೆ ಹೋಗಿದ್ದಾಳೆ.

ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದಾಗ, ತಲಾಖ್ ಮೂಲಕ ವಿಚ್ಛೇಧನ ನೀಡುವುದನ್ನು ರದ್ದು ಗೊಳಿಸಿ, ನ್ಯಾಯ ಕೊಡಿಸಿ ಎಂದು ಆಕೆ ಪ್ರಧಾನಿಗೆ ಪತ್ರ ಬರೆದು, ಅದರ ಕಾಪಿಯನ್ನು ಯೋಗಿ ಆದಿತ್ಯನಾಥ್ ಅವರಿಗೆ ಕಳುಹಿಸಿದ್ದಾಳೆ. ಇತ್ತ ಪತ್ರ ದೆಹಲಿ ತಲುಪುತ್ತಿದ್ದಂತೆ, ಉತ್ತರ ಪ್ರದೇಶದ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಗುರುವಾರ ಆಕೆಯನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿ, ಪತಿಯನ್ನು ವಶಕ್ಕೆ ಪಡೆದಿದ್ದಾರೆ.

ನನಗಿಬ್ಬರು ಹೆಣ್ಣು ಮಕ್ಕಳು. ಮತ್ತೊಮ್ಮೆ ಗರ್ಭ ಧರಿಸಿದ್ದೇನೆ. ಮತ್ತೆ ಹೆಣ್ಣು ಮಗು ಹುಟ್ಟುತ್ತದೇನೋ ಎಂಬ ಭಯ ನಮ್ಮ ಅತ್ತೆಯ ಮನೆಯವರಿಗೆ. ಹೀಗಾಗಿ ಗರ್ಭ ತೆಗೆಸಲು ನನಗೆ ಒತ್ತಡ ತಂದರು. ಒಪ್ಪದಿದ್ದಕ್ಕೆ ಕಿರುಕುಳ ನೀಡಿದರು. ಇದೇ ತಿಂಗಳ 24 ರಂದು ಬಲವಂತವಾಗಿ ಮನೆಯಿಂದ ಹೊರಗೆ ಹಾಕಿದರು. ಗರ್ಭಿಣಿ ಎಂದು ನೋಡದೆ ಹೊಟ್ಟೆಯ ಮೇಲೆ ಹೊಡೆದು, ಕೇವಲ ಬಾಯಿ ಮಾತಿನಿಂದ ತಲಾಖ್ ಹೇಳಿ ವಿಚ್ಛೇಧನ ನೀಡಿದ್ದಾರೆ ಎಂದು ಆಕೆ ನೋವು ತೋಡಿಕೊಂಡಿದ್ದಾಳೆ.

Loading...

Leave a Reply

Your email address will not be published.

error: Content is protected !!