ಪತ್ನಿ ಕಾಟ ಕೊಡ್ತಾಳೆ ಜೈಲಿಗಾಕಿ ಎಂದ, ಒಪ್ಪದ ಎಸಿಪಿಗೆ ಪಂಚ್ ನೀಡಿ ಒಳಗೋದ! – News Mirchi

ಪತ್ನಿ ಕಾಟ ಕೊಡ್ತಾಳೆ ಜೈಲಿಗಾಕಿ ಎಂದ, ಒಪ್ಪದ ಎಸಿಪಿಗೆ ಪಂಚ್ ನೀಡಿ ಒಳಗೋದ!

ಗಯ್ಯಾಳಿ ಪತ್ನಿಯೊಂದಿಗೆ ಯಾರಾದರೂ ಜಗಳವಾಡುತ್ತಾರೆ, ಇಲ್ಲವಾದರೆ ಮೌನಕ್ಕೆ ಶರಣಾಗುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಪೊಲೀಸ್ ಠಾಣೆಗೆ ಹೋಗಿ ಎಸಿಪಿ ಕೆನ್ನೆಗೇ ಪಟಾರ್ ಅನ್ನಿಸಿದ್ದಾರೆ. ಹೌದು ಈ ಘಟನೆ ಜೈಪುರದಲ್ಲಿ ನಡೆದಿದೆ. ಮೊದಲು ಎಸಿಪಿ ಮೇಲೆ ಕೈ ಮಾಡುವುದಕ್ಕೂ ಮುನ್ನ ಆತ ತನ್ನನ್ನು ಜೈಲಿನಲ್ಲಿರಿಸುವಂತೆ ಬೇಡಿಕೊಂಡಿದ್ದಾನೆ. ಇದಕ್ಕೆ ಪೊಲೀಸರು ಒಪ್ಪದಿದ್ದಾಗ ನಮ್ಮವನಿಗೆ ಒಂದು ಐಡಿಯಾ ಹೊಳೆದಿದೆ. ಕೂಡಲೇ ಎಸಿಪಿಗೆ ಒಂದು ಬಾರಿಸಿದ್ದಾನೆ. ಇಷ್ಟಾದ ಮೇಲೂ ಪೊಲೀಸರು ಸುಮ್ನಿರ್ತಾರಾ… ಊಹೂಂ ಒದ್ದು ಒಳಗಾಕಿದ್ರು. ಈಗ ಆತ ಸಂತೋಷದಿಂದ ಕಂಬಿ ಎಣಿಸುತ್ತಿದ್ದಾನೆ.

ವಿವರಗಳಿಗೆ ಹೋಗುವುದಾದರೆ… 30 ವರ್ಷದ ಯೋಗೇಶ್ ಗೋಲ್ಯಾ ಎಂಬಾತ ಗುರುವಾರ ಶಿಪ್ಪಾಪಾತ್ ಪೊಲೀಸ್ ಠಾಣೆಗೆ ಹೋಗಿ “ನಾನು ಜೈಲಿಗೆ ಹೋಗಬೇಕೆಂದುಕೊಂಡಿದ್ದೇನೆ, ನನ್ನ ಪತ್ನಿಯನ್ನು ಹೊಡೆದಿದ್ದೇನೆ, ದಯವಿಟ್ಟು ನನ್ನನ್ನು ಜೈಲಿಗೆ ಹಾಕಿ” ಎಂದು ಪೊಲೀಸರಲ್ಲಿ ಬೇಡಿಕೊಂಡಿದ್ದಾನೆ. ಇದನ್ನು ನೋಡಿ ಪೊಲೀಸರು ಆಶ್ಚರ್ಯಗೊಂಡಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ಆತನ ಪತ್ನಿಯೂ ಪೊಲೀಸ್ ಠಾಣೆಗೆ ಧಾವಿಸಿದಳು. ನನ್ನನ್ನು ನನ್ನ ಗಂಡ ಹೊಡೆದಿದ್ದಾನೆ ಕೇಸು ಹಾಕಿ ಎಂದು ಮನವಿ ಮಾಡಿದಳು. ಇದು ಕುಟುಂಬ ಕಲಹವೆಂದು ಅರಿತ ಪೊಲೀಸರು ಬುದ್ದಿ ಹೇಳಿ ಬಗೆಹರಿಸಬೇಕೆಂದು ನೋಡಿದರು. ಮಾನ್ಸರೋವರ್ ಎಸಿಪಿ ದೇಶ್ ರಾಜ್ ಯಾದವ್ ಇಬ್ಬರನ್ನೂ ಕೂರಿಸಿ ಬುದ್ದಿ ಹೇಳಲು ಯತ್ನಿಸಿದರು.

ಬುದ್ದಿ ಹೇಳುತ್ತಾ ಎಸಿಪಿ ದೇಶ್ ರಾಜ್ ಯಾದವ್ ಯೋಗೇಶ್ ಹೆಗಲಿನ ಮೇಲೆ ಕೈಹಾಕಿದರು. ಕೂಡಲೇ ಎಸಿಪಿ ಮುಖಕ್ಕೆ ಗಟ್ಟಿಯಾಗಿ ಪಂಚ್ ನೀಡಿದ ಯೋಗೇಶ್. ಎಸಿಪಿ ತುಟಿ ಹರಿದು ರಕ್ತ ಸುರಿಯಿತು. “ಈಗಲಾದರೂ ಜೈಲಿಗೆ ಹೋಗ್ತೀನಿ”, ನನ್ನ ಪತ್ನಿ ತುಂಬಾ ಕಾಟ ಕೊಡ್ತಿದಾಳೆ ಎಂದು ಹೇಳಿದ ಯೋಗೀಶನನ್ನು ಪೊಲೀಸರು ಒದ್ದು ಒಳಗೆ ಹಾಕಿದ್ದಾರೆ.

Loading...